ಪೀಣ್ಯ ಎಕ್ಸ್‌ಪ್ರೆಸ್@300: ಅಭಿಮನ್ಯು ಮಿಥುನ್ ಅಪೂರ್ವ ಸಾಧನೆ

0
PC: Twitter

ಬೆಂಗಳೂರು, ಜನವರಿ 17: ಕರ್ನಾಟಕದ ವೇಗದ ಬೌಲರ್, ಪೀಣ್ಯ ಎಕ್ಸ್‌ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 300 ವಿಕೆಟ್ ಗಳನ್ನು ಪೂರ್ತಿಗೊಳಿಸಿದ್ದಾರೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ಸ್ ಪಡೆಯುವ ಮೂಲಕ ಮಿಥುನ್ ತಮ್ಮ 94ನೇ ಪಂದ್ಯದಲ್ಲಿ ಈ ಮೈಲುಗಲ್ಲು ನೆಟ್ಟರು. ಪ್ರಥಮ ಇನ್ನಿಂಗ್ಸ್ ನಲ್ಲಿ 3 ವಿಕೆಟ್ಸ್ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದ ಮಿಥುನ್, ರಾಜಸ್ಥಾನದ ರಾಜೇಶ್ ಬಿಷ್ಣೋಯ್ ವಿಕೆಟ್ ಪಡೆಯುವ ಮೂಲಕ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 300  ವಿಕೆಟ್ ಗಳನ್ನು ಪೂರ್ತಿಗೊಳಿಸಿದರು. ಈ 300 ವಿಕೆಟ್ ಗಳಲ್ಲಿ ಮಿಥುನ್ ರಣಜಿ ಕ್ರಿಕೆಟ್ ನಲ್ಲಿ 241 ವಿಕೆಟ್ ಪಡೆದಿದ್ದಾರೆ.

2009ರಲ್ಲಿ ಮೀರತ್ ನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದೊಂದಿಗೆ ಪ್ರಥಮದರ್ಜೆ ಕ್ರಿಕೆಟ್ ಗೆ ಮಿಥುನ್ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 10 ವಿಕೆಟ್ಸ್ ಕಬಳಿಸಿದ್ದ ಮಿಥುನ್ ಭರ್ಜರಿ ಸಾಧನೆಯೊಂದಿಗೆ ಪ್ರಥಮದರ್ಜೆ ಕ್ರಿಕೆಟ್ ಗೆ ಕಾಲಿಟ್ಟಿದ್ದರು.

ಭಾರತದ ಪರ 4 ಟೆಸ್ಟ್ ಪಂದ್ಯಗಳನ್ನಾಡಿದ 9 ವಿಕೆಟ್ಸ್ ಪಡೆದಿರುವ 29 ವರ್ಷದ ಮಿಥುನ್, ಒಟ್ಟು 94 ಪ್ರಥಮದರ್ಜೆ ಪಂದ್ಯಗಳಿಂದ 27.94ರ ಸರಾಸರಿಯಲ್ಲಿ 300 ವಿಕೆಟ್ಸ್ ಪಡೆದಿದ್ದಾರೆ. ಇದರಲ್ಲಿ 11 ಪಂದ್ಯ ಇನ್ನಿಂಗ್ಸ್ ಒಂದರಲ್ಲಿ 5 ಹಾಗೂ ಐದಕ್ಕಿಂತ ಹೆಚ್ಚು ವಿಕೆಟ್ಸ್, ಎರಡು ಬಾರಿ ಪಂದ್ಯವೊಂದರಲ್ಲಿ 10 ಮತ್ತು 10ಕ್ಕಿಂತ ಹೆಚ್ಚು ವಿಕೆಟ್ಸ್ ಕಬಳಿಸಿದ್ದಾರೆ.

ಮಿಥುನ್ ಪ್ರಥಮದರ್ಜೆ ಕ್ರಿಕೆಟ್ ಸಾಧನೆ

ಪಂದ್ಯ: 94

ವಿಕೆಟ್ಸ್: 300

ಸರಾಸರಿ: 27.94

ಎಕಾನಮಿ: 3.16

ಬೆಸ್ಟ್ ಬೌಲಿಂಗ್: 6/36

5 ವಿಕೆಟ್ಸ್: 11 ಬಾರಿ

10 ವಿಕೆಟ್ಸ್: 2 ಬಾರಿ

LEAVE A REPLY

Please enter your comment!
Please enter your name here

1 × two =