ಪೃಥ್ವಿ ಶಾಗೆ ಗಾಯ: ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್‌ಗೆ ಅಲಭ್ಯ

0

ಸಿಡ್ನಿ, ನವೆಂಬರ್ 30: ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾದದ ಗಾಯಕ್ಕೊಳಗಾಗಿರುವ ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯ ೩ನೇ ದಿನವಾದ ಶುಕ್ರವಾರ ಪೃಥ್ವಿ ಶಾ ಎಡ ಪಾದದ ಗಾಯಕ್ಕೊಳಗಾದರು. ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್‌ನ ಮ್ಯಾಕ್ಸ್ ಬ್ರಯಾಂಟ್ ನೀಡಿದ ಕ್ಯಾಚನ್ನು ಮಿಡ್‌ವಿಕೆಟ್‌ನಲ್ಲಿದ್ದ ಪೃಥ್ವಿ ಶಾ ಪಡೆಯಲು ಯತ್ನಿಸಿದರು. ಆದರೆ ಕ್ಯಾಚ್ ಪಡೆದು ನೆಲಕ್ಕೆ ಬಿದ್ದಾಗ ಎಡ ಪಾದದ ಮೂಳೆ ಮುರಿತಕ್ಕೊಳಗಾದರು. ಹೀಗಾಗಿ ಡಿಸೆಂಬರ್ 6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್‌ಗೆ ಪೃಥ್ವಿ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಪ್ರಥಮ ಟೆಸ್ಟ್‌ನಲ್ಲಿ ಕನ್ನಡಿಕ ಕೆ.ಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

LEAVE A REPLY

Please enter your comment!
Please enter your name here

five + twenty =