ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ನೂರು, ಮುಂಬೈ 400; ರೈಲ್ವೇಸ್ ನುಚ್ಚುನೂರು

0
PC: BCCI

ಬೆಂಗಳೂರು, ಸೆಪ್ಟೆಂಬರ್ 23: ಪೃಥ್ವಿ ಶಾ(129) ಮತ್ತು ಶ್ರೇಯಸ್ ಅಯ್ಯರ್(144) ಅವರ ಸಿಡಿಲಬ್ಬರದ ಶತಕಗಳ ನೆರವಿನಿಂದ ಮುಂಬೈ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ 173 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಸತತ 3 ಗೆಲುವುಗಳೊಂದಿಗೆ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ, ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಜಸ್ಟ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ರನ್ ಹೊಳೆಯನ್ನೇ ಹರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 400 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. 18 ವರ್ಷದದ ಪೃಥ್ವಿ ಶಾ 81 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 129 ರನ್ ಸಿಡಿಸಿದರೆ, ಸತತ 2ನೇ ಶತಕ ದಾಖಲಿಸಿದ ಶ್ರೇಯಸ್ ಅಯ್ಯರ್ 118 ಎಸೆತಗಳಲ್ಲಿ 8 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 144 ರನ್ ಸಿಡಿಸಿದರು. ಕರ್ನಾಟಕ ವಿರುದ್ಧವೂ ಶ್ರೇಯಸ್ ಶತಕ ಗಳಿಸಿದ್ದರು.
ನಂತರ 401 ರನ್‌ಗಳ ಅಸಾಧ್ಯ ಗುರಿ ಬೆನ್ನಟ್ಟಿದ ರೈಲ್ವೇಸ್ 42.4 ಓವರ್‌ಗಳಲ್ಲಿ 227 ರನ್‌ಗಳಿಗೆ ಆಲೌಟಾಯಿತು.

Brief scores:
Mumbai: 400/5 in 50 overs (Prithvi Shaw 129, Shreyas Iyer 144, Suryakumar Yadav 67; Anureet Singh 3/73) beat Railways: 227 all out in 42.4 overs (Saurabh Wakaskar 48, Mrunal Decdhar 36, Prashant Awasthi 41; Shams Mulani 3/26, Dhawal Kulkarni 2/50) by 173 runs.

LEAVE A REPLY

Please enter your comment!
Please enter your name here

1 × three =