ಪೋಲಿ ಪಾಂಡ್ಯ ಇರೋ ಬಸ್‌ನಲ್ಲಿ ಪತ್ನಿ-ಮಗಳೊಂದಿಗೆ ಪ್ರಯಾಣಿಸಲ್ಲ… ಹರ್ಭಜನ್ ಸಿಂಗ್ ಹೀಗಂದಿದ್ಯಾಕೆ ಗೊತ್ತಾ..?

0

ಬೆಂಗಳೂರು, ಜನವರಿ 12: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಬಿಸಿಸಿಐ ಅಮಾನತುಗೊಳಿಸಿದೆ.
ಇದೀಗ ಮಹಿಳೆಯರ ಬಗ್ಗೆ ಕೀಳು ಮಟ್ಟದ ಮಾತುಗಳನ್ನಾಡಿರುವ ಪೋಲಿ ಪಾಂಡ್ಯ ವಿರುದ್ಧ ಟರ್ಬನೇಟರ್ ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ. ಖಾಸಗಿ ವಾಹಿನಿಯೊಂದಿಗೆ ಮಾತುನಾಡುತ್ತಾ ಪಾಂಡ್ಯ ವಿರುದ್ಧ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘’ಮುಂದೆ ಯಾವುದೇ ಪಾರ್ಟಿಗಳಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಕರೆ ಆತನನ್ನು ನಾನು ಮಾತನಾಡಿಸುವುದಿಲ್ಲ. ಅಷ್ಟೇ ಅಲ್ಲ… ಹಾರ್ದಿಕ್ ಪಾಂಡ್ಯ ಇರುವ ಬಸ್ ನಲ್ಲಿ ನಾನು ಯಾವುದೇ ಕಾರಣಕ್ಕೂ ನನ್ನ ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುವುದಿಲ್ಲ’’ ಎಂದು ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಮಹಿಳೆಯರ ಬಗ್ಗೆ ಇರುವ ಕೀಳು ಅಭಿರುಚಿಯ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

four × 3 =