ಪ್ರೊ ಕಬಡ್ಡಿ ಲೀಗ್: ಪವನ್ ಸಾಹಸ, ಬೆಂಗಳೂರು ಬುಲ್ಸ್ ಚಾಂಪಿಯನ್

0

ಮುಂಬೈ, ಜನವರಿ 5: ರೇಡ್ ಮಷಿನ್ ಪವನ್ ಸೆರಾವತ್ (25 ರೇಡ್ ಗಳಲ್ಲಿ 22 ರೇಡ್ ಪಾಯಿಂಟ್ಸ್) ಅವರ ಅಮೋಘ ದಾಳಿಗಳ ಬಲದಿಂದ ಗುಜರಾತ್ ಫಾರ್ಚೂನ್ ಜೈಂಟ್ಸ್ ಗರ್ವಭಂಗ ಮಾಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

ಮುಂಬೈನ NSCI ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಫೈನಲ್ ಹಣಾಹಣಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ತಂಡವನ್ನು 38-33 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. 

ಪ್ರಥಮಾರ್ಧದಲ್ಲಿ (9-16) ಏಳು ಅಂಕಗಳ ಹಿನ್ನಡೆ ಅನುಭವಿಸಿದ ರೆಡ್ ಆರ್ಮಿ ದ್ವಿತೀಯಾರ್ಧದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿತು. ಅದರಲ್ಲೂ ಗುಜರಾತ್ ಕೋಟೆಯೊಳಗೆ ಮದ್ದಾನೆಯಂತೆ ನುಗ್ಗಿದ ಯುವ ರೇಡರ್ ಪವನ್ ಸೆರಾವತ್ ತಮ್ಮ ಒಟ್ಟು 25 ರೇಡ್ ಗಳಲ್ಲಿ 22 ಅಂಕ ಕಲೆ ಹಾಕಿ ಗೆಲುವಿನ ರೂವಾರಿಯಾದರು.  ಗುಜರಾತ್ ತಂಡ ಸತತ 2ನೇ ಬಾರಿಯೂ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

2015ರಲ್ಲಿ ಫೈನಲ್ ಪ್ರವೇಶಿಸಿ ಯು ಮುಂಬಾ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್, ಈ ಬಾರಿ ಪ್ರಶಸ್ತಿ ಗೆದ್ದು 3 ಕೋಟಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

https://twitter.com/anandmahindra/status/1081589010093481984?s=21

LEAVE A REPLY

Please enter your comment!
Please enter your name here

twenty − six =