ಪ್ರೊ ಕಬಡ್ಡಿ: ಹಾಲಿ ಚಾಂಪಿಯನ್ಸ್ ಪಟ್ನಾಗೆ ಶಾಕ್, ತಲೈವಾಸ್ ರಾಕ್

0

ಚೆನ್ನೈ, ಅಕ್ಟೋಬರ್ 7: ಹಾಲಿ ಚಾಂಪಿಯನ್ಸ್, 3 ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ವಿರುದ್ಧದ ಅದ್ಭುತ ಗೆಲುವಿನೊಂದಿಗೆ ತಮಿಳ್ ತಲೈವಾಸ್ ತಂಡ, 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಸಕ್ತ ಸಾಲಿನ ಉದ್ಘಾಟನಾ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ, ಪಟ್ನಾ ಪೈರೇಟ್ಸ್ ತಂಡವನ್ನು 42-26 ಅಂಕಗಳಿಂದ ಬಗ್ಗು ಬಡಿಯಿತು. ಇದರೊಂದಿಗೆ ಅಜಯ್ ಠಾಕೂರ್ ನೇತೃತ್ವದ ತಮಿಳ್ ತಲೈವಾಸ್ ತಂಡ ತವರು ನೆಲದಲ್ಲಿ ಮೊದಲ ಗೆಲುವು ದಾಖಲಿಸಿತು.
ತಮಿಳ್ ತಲೈವಾಸ್ ಪರ ನಾಯಕ ಅಜಯ್ ಠಾಕೂರ್, ಅನುಭವಿ ಆಲ್ರೌಂಡರ್ ಮಂಜೀತ್ ಚಿಲ್ಲಾರ್, ಜಸ್ವೀರ್ ಸಿಂಗ್ ಮತ್ತು ಡಿಫೆಂಡರ್ ಅಮಿತ್ ಹೂಡ ಅದ್ಭುತ ಆಟವಾಡಿ ಗೆಲುವಿಗೆ ಕಾರಣರಾದರು. ಭಾರತ ಹಾಗೂ ತಮಿಳ್ ತಲೈವಾಸ್ ನಾಯಕ ಅಜಯ್ ಠಾಕೂರ್ ಸೂಪರ್-10 ಮೊದಲ ಪಂದ್ಯದಲ್ಲೇ ಸಾಧನೆ ಮಾಡಿದರು. ಪಟ್ನಾ ಪೈರೇಟ್ಸ್ ತಂಡದ ನಾಯಕ ಹಾಗೂ ಡುಬ್ಕಿ ಕಿಂಗ್ ಖ್ಯಾತಿಯ ಪ್ರದೀಪ್ ನರ್ವಾಲ್ ಅವರಿಗೆ ಕಡಿವಾಣ ಹಾಕಿದ್ದರಿಂದ ತಮಿಳ್ ತಲೈವಾಸ್ ಗೆಲುವು ದಾಖಲಿಸುವಂತಾಯಿತು.
ಯು ಮುಂಬಾ ಮತ್ತು ಪುಣೇರಿ ಪಲ್ಟನ್ ನಡುವಿನ ದಿನದ 2ನೇ ಪಂದ್ಯ 32-32ರಲ್ಲಿ ರೋಚಕವಾಗಿ ಟೈಗೊಂಡಿತು.

LEAVE A REPLY

Please enter your comment!
Please enter your name here

3 × 4 =