ಪ್ರೊ ವಾಲಿಬಾಲ್ ಲೀಗ್ ಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧೂ ಬೆಂಬಲ

0
PV Sindhu. PC: BAI

ಮುಂಬೈ, ನವೆಂಬರ್ 3: ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ವಿಶ್ವದ 2ನೇ rankನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧೂ, ಪ್ರೊ ವಾಲಿಬಾಲ್ ಲೀಗ್ ಜೊತೆ ಕೈ ಜೋಡಿಸಿ ಲೀಗ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರೊ ವಾಲಿಬಾಲ್ ಲೀಗ್, ಅಮೆರಿಕದ ವಾಲಿಬಾಲ್ ದಿಗ್ಗಜ ಹಾಗೂ 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಡೇವಿಡ್ ಲೀ ಅವರೊಂದಿಗೂ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಆವೃತ್ತಿಯ ಟೂರ್ನಿಯಲ್ಲಿ ಆಡಲಿದ್ದಾರೆ.

ಸಿಂಧೂ ಮತ್ತು ಡೇವಿಡ್ ಲೀ ಈಗಾಗಲೇ ಟೂರ್ನಿಯ ಪ್ರೊಮೋಷನಲ್ ವೀಡಿಯೊದಲ್ಲಿ ಭಾಗಿಯಾಗಿದ್ದು, ಇದರ ಶೂಟಿಂಗ್ ಕೂಡ ನಡೆದಿದೆ.

ದೇಶದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಸಿಂಧೂ ವಾಲಿಬಾಲ್ ಕುಟುಂಬಕ್ಕೆ ಸೇರಿದವರು. ಸಿಂಧೂ ಅರ ಸಂಜೆ ಪಿ.ವಿ ರಮಣ ಮತ್ತು ತಾಯಿ ವಿಜಯಾ ಇಬ್ಬರೂ ವಾಲಿಬಾಲ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ರಮಣ, 1986ರ ಸೋಲ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 2000ನೇ ಇಸವಿಯಲ್ಲಿ ರಮಣ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಸಿಂಧೂ ತಾಯಿ ವಿಜಯಾ ರೈಲ್ವೇಸ್ ಪರ ಆಡಿದ್ದರು.

LEAVE A REPLY

Please enter your comment!
Please enter your name here

sixteen + one =