ಫಸ್ಟ್ ಮತ್ತು ಲಾಸ್ಟ್ ಟೆಸ್ಟ್‌ಗಳಲ್ಲಿ ಶತಕ, ಅಲಸ್ಟೇರ್ ಕುಕ್ ದಾಖಲೆ

0
PC: Lords Cricket Ground/Twitter
ಲಂಡನ್, ಸೆಪ್ಟೆಂಬರ್ 10: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್, ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ 5ನೇ ಹಾಗೂ ತಮ್ಮ ವಿದಾಯದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.
PC: twitter
ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ 4ನೇ ದಿನವಾದ ಸೋಮವಾರ ಟೆಸ್ಟ್ ವೃತ್ತಿಜೀವನದ 33ನೇ ಶತಕ ಗಳಿಸಿದರು. ಇದು 33 ವರ್ಷದ ಕುಕ್ ಅವರ ವಿದಾಯದ ಅಂತರಾಷ್ಟ್ರೀಯ ಪಂದ್ಯವಾಗಿದ್ದು, ಈ ಟೆಸ್ಟ್ ನಂತರ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.ಭಾರತ ವಿರುದ್ಧ 2006ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಲಸ್ಟೇರ್ ಕುಕ್, ತಮ್ಮ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ್ದರು. ಇದೀಗ ವಿದಾಯದ ಟೆಸ್ಟ್‌ನಲ್ಲೂ ಶತಕ ಸಾಧನೆ ಮಾಡಿದ್ದಾರೆ. ಅಲ್ಲದೆ ಮೊದಲ ಟೆಸ್ಟ್ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಶತಕ ಬಾರಿಸಿದ ವಿಶ್ವದ 5ನೇ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕುಕ್ ಪಾತ್ರರಾಗಿದ್ದಾರೆ. ಭಾರತ ಪರ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಾತ್ರ ಈ ಸಾಧನೆ ಮಾಡಿದ್ದಾರೆ.
ಮೊದಲ ಹಾಗೂ ಕೊನೆಯ ಟೆಸ್ಟ್‌ಗಳಲ್ಲಿ ಶತಕ ಬಾರಿಸಿದವರು
1. ರೆಗ್ ಡಫ್‌(ಆಸ್ಟ್ರೇಲಿಯಾ):               104 (ಇಂಗ್ಲೆಂಡ್ ವಿರುದ್ಧ, 1902) ಮತ್ತು    146 (ಇಂಗ್ಲೆಂಡ್ ವಿರುದ್ಧ, 1905)
2. ಬಿಲ್ ಪೋನ್‌‌ಫೋರ್ಡ್(ಆಸ್ಟ್ರೇಲಿಯಾ): 110 (ಇಂಗ್ಲೆಂಡ್ ವಿರುದ್ಧ, 1924) ಮತ್ತು     266 (ಇಂಗ್ಲೆಂಡ್ ವಿರುದ್ಧ, 1934)
3. ಗ್ರೆಗ್ ಚಾಪೆಲ್(ಆಸ್ಟ್ರೇಲಿಯಾ):          108 (ಇಂಗ್ಲೆಂಡ್ ವಿರುದ್ಧ, 1970) ಮತ್ತು     182 (ಪಾಕಿಸ್ತಾನ ವಿರುದ್ಧ, 1984)
4. ಮೊಹಮ್ಮದ್ ಅಜರುದ್ದೀನ್(ಭಾರತ):  110 (ಇಂಗ್ಲೆಂಡ್ ವಿರುದ್ಧ, 1984) ಮತ್ತು     102 (ದಕ್ಷಿಣ ಆಫ್ರಿಕಾ, 2000)
5. ಅಲಸ್ಟೇರ್ ಕುಕ್(ಇಂಗ್ಲೆಂಡ್):           104* (ಇಂಗ್ಲೆಂಡ್ ವಿರುದ್ಧ, 2006) ಮತ್ತು    147 (ಭಾರತ ವಿರುದ್ಧ 2018)

LEAVE A REPLY

Please enter your comment!
Please enter your name here

thirteen + 5 =