ಬರಲಿದೆ ರೆಡ್ ಬುಲ್ ಶಟಲ್ ಅಪ್ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್

0

ಬೆಂಗಳೂರು, ಅಕ್ಟೋಬರ್ 05: ದೇಶದ ಮೊದಲ ಮತ್ತು ಏಕೈಕ ರೆಡ್ ಬುಲ್ ಶಟಲ್ ಅಪ್ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ಟೂರ್ನಿ ಈ ತಿಂಗಳು ಆರಂಭವಾಗಲಿದೆ.
ದೆಹಲಿ, ಬೆಂಗಳೂರು, ಗುವಾಹಟಿ, ಹೈದರಾಬಾದ್ ಮತ್ತು ಮುಂಬೈನಲ್ಲಿ ಅರ್ಹತಾ ಸುತ್ತಿನ ಟೂರ್ನಿಗಳು ನಡೆಯಲಿವೆ. ಟೂರ್ನಿಯಲ್ಲಿ ಗೆಲ್ಲುವ ಜೋಡಿ, ದೇಶದ ಅಗ್ರಮಾನ್ಯ ಮಹಿಳಾ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಆಡುವ ಅವಕಾಶ ಪಡೆಯಲಿದ್ದಾರೆ.
ಹೊಸ ಟೂರ್ನಿಯ ಬಗ್ಗೆ ಮಾತನಾಡಿರುವ ಅಶ್ವಿನಿ ಪೊನ್ನಪ್ಪ, ‘‘ದೇಶದಲ್ಲಿ ಡಬಲ್ಸ್ ಬ್ಯಾಡ್ಮಿಂಟನ್ ಬಗ್ಗೆ ಅರಿವು ಮೂಡಿಸುವುದು ಮತ್ತು ಅದನ್ನು ಉತ್ತೇಜಿಸುವುದು ನನ್ನ ಕನಸು. ಡಬಲ್ಸ್ ಆಟಗಾರ, ಆಟಗಾರ್ತಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು, ಟೂರ್ನಿಗಳಿಗೆ ಹೆಚ್ಚಿನ ಪ್ರಚಾರ, ಬಹುಮಾನ ಮೊತ್ತಗಳು ಯುವ ಜನತೆಯನ್ನು ಡಬಲ್ಸ್‌ನತ್ತ ಆಕರ್ಷಿಸಲಿವೆ. ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗಿನ ಯುವಜನತೆ ಡಬಲ್ಸ್‌ನತ್ತ ಆಸಕ್ತಿ ತೋರುತ್ತಿದ್ದಾರೆ,’’ ಎಂದಿದ್ದಾರೆ.

LEAVE A REPLY

Please enter your comment!
Please enter your name here

18 + 5 =