ಬಾಕ್ಸಿಂಗ್ ಡೇ ಟೆಸ್ಟ್: ಕಾಂಗರೂಗೆ ಸೋಲಿನ ಪಂಚ್, ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಂಡ ಭಾರತ

0
PC: BCCI

ಮೆಲ್ಬರ್ನ್, ಡಿಸೆಂಬರ್ 30: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ 137 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.

ಗೆಲ್ಲಲು 399 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 4ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿತ್ತು. 5ನೇ ದಿನವಾದ ಭಾನುವಾರ ಆಟ ಮುಂದುವರಿಸಿದ ಆಸೀಸ್ ತನ್ನ ಮೊತ್ತಕ್ಕೆ ಕೇವಲ 3 ನ್ ಸೇರಿಸಿ 261 ರನ್ ಗಳಿಗೆ ಆಲೌಟಾಯಿತು.

ಭಾರತ ಪರ ಅಮೋಘ ದಾಳಿ ಸಂಘಟಿಸಿದ ವೇಗಿ ಜಸ್ಪ್ರೀತ್ ಬುಮ್ರಾ(3/53) ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ(3/82) ತಲಾ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ(2/40) ಹಾಗೂ ಮೊಹಮ್ಮದ್ ಶಮಿ(2/71) ತಲಾ ಎರಡು ವಿಕೆಟ್ ಉರುಳಿಸಿದರು.

3ನೇ ಟೆಸ್ಟ್ ಪಂದ್ಯವನ್ನುಗೆಲ್ಲುವ ಮೂಲಕ ಟೀಮ್ ಇಂಡಿಯಾ, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 37 ವರ್ಷಗಳ ನಂತರ ಮೊದಲ ಟೆಸ್ಟ್ ಗೆಲುವು ದಾಖಲಿಸಿತು.

ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ವೇಗಿ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಗೌರವ ತಮ್ಮದಾಗಿಸಿಕೊಂಡರು.

Brief scores

India: 443/7 declared and 106/8 declared in 37.3 overs (Mayank Agarwal 43, Rishabh Pant 33; Patt Cummins 6/27) beat Australia: 151 and 261 all out in 89.3 overs (Patt Cummins 63, Shaun Marsh 44; Jaspreet Bumrah 3/53, Ravindra Jadeja 3/82, Ishant Sharma 2/40, Mohammed Shami 2/71) by 137 runs.

LEAVE A REPLY

Please enter your comment!
Please enter your name here

eighteen + one =