ಬಾಕ್ಸಿಂಗ್ ಡೇ ಟೆಸ್ಟ್: ಬೂಮ್ ಬೂಮ್ ಬುಮ್ರಾ… ಆಸೀಸ್ ಉಡೀಸ್..!

0

ಮೆಲ್ಬರ್ನ್, ಡಿಸೆಂಬರ್ 16: ವೇಗಿ ಜಸ್ಪ್ರೀತ್ ಬುಮ್ರಾ (6/33) ಅವರ ಮಾರಕ ದಾಳಿಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಉಡೀಸ್ ಆಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 292 ರನ್ ಗಳ ದೊಡ್ಡ ಮುನ್ನಡೆ ಗಳಿಸಿದೆ.
ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ದಿಢೀರ್ ಕುಸಿತ ಕಂಡು 3ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದೆ. ಹನುಮ ವಿಹಾರಿ(13), ಚೇತೇಶ್ವರ್ ಪೂಜಾರ(0), ವಿರಾಟ್ ಕೊಹ್ಲಿ(0), ಅಜಿಂಕ್ಯ ರಹಾನೆ(1) ಮತ್ತು ರೋಹಿತ್ ಶರ್ಮಾ(5) ಔಟಾಗಿದ್ದು, ಮಯಾಂಕ್ ಅಗರ್ವಾಲ್(ಅಜೇಯ 28) ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ (ಅಜೇಯ 6) 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಭಾರತ ಒಟ್ಟು 346 ರನ್ ಮುನ್ನಡೆಯಲ್ಲಿದೆ.
ಆಸ್ಟ್ರೇಲಿಯಾದ ಪ್ರಥಮ ಇನ್ನಿಂಗ್ಸ್ ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅದ್ಭುತ ದಾಳಿ ಸಂಘಟಿಸಿದರು. ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಂದ 3ನೇ ದಿನದಾಟ ಮುಂದುವರಿಸಿದ ಆಸೀಸ್ ಕೇವಲ 151 ರನ್ ಗಳಿಗೆ ಆಲೌಟಾಯಿತು. ರಿವರ್ಸ್ ಸ್ವಿಂಗಿಂಗ್ ಯಾರ್ಕರ್ ಗಳ ಮೂಲಕ ಶಾನ್ ಮಾರ್ಷ್, ನೇಥನ್ ಲಯಾನ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದ ರೀತಿ ಬುಮ್ರಾ ತಾಕತ್ತಿಗೆ ಸಾಕ್ಷಿಯಾಗಿತ್ತು. ಅಲ್ಲದೆ ಬುಮ್ರಾ ಅವರ ಅಮೋಘ ಇನ್ ಸ್ವಿಂಗ್ ಎಸೆತಕ್ಕೆ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡಾದರು. 33 ರನ್ನಿತ್ತು 6 ವಿಕೆಟ್ ಉಡಾಯಿಸಿದ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಜೀವನಶ್ರೇಷ್ಠ ಪ್ರದರ್ಶನವಿತ್ತರು.

PC: BCCI

Brief scores
India: 443/7 declared and 54/5 in 27 overs (Mayank Agarwal 28 not out, Hanuma Vihari 13; Patt Cummins 4/10, Josh Hazlewood 1/13) Vs Australia: 151 all out in 66.5 overs (Marcus Harris 22, Tim Paine 22; Jaspreet Bumrah 5/33, Ravindra Jadeja 2/45, Ishant Sharma 1/41, Mohammad Shami 1/27).

LEAVE A REPLY

Please enter your comment!
Please enter your name here

20 − fourteen =