ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನ ಭಾರತ ಎಚ್ಚರಿಕೆಯ ಆಟ

0

ಮೆಲ್ಬರ್ನ್, ಡಿಸೆಂಬರ್ 26: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಮೊದಲ ದಿನ ಎಚ್ಚರಿಕೆಯ ಆಟವಾಡಿದೆ.
ಮೊದಲ ದಿನದಂತ್ಯಕ್ಕೆ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದ್ದು, ಚೇತೇಶ್ವರ್ ಪೂಜಾರ(ಅಜೇಯ 68) ಮತ್ತು ನಾಯಕ ವಿರಾಟ್ ಕೊಹ್ಲಿ(ಅಜೇಯ 47) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ಹೊಸ ಜೋಡಿಯಾದ ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಮೊದಲ ವಿಕೆಟ್ ಗೆ 40 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಿಂದ ಆರಂಭಿಕನ ಸ್ಥಾನಕ್ಕೆ ಬಡ್ತಿ ಪಡೆದ ವಿಹಾರಿ 8 ರನ್ ಗಳಿಸಿ ಔಟಾದರೆ, ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಮಯಾಂಕ್ 76 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು.
ಔಟಾಗುವ ಮೊದಲು ಮಯಾಂಕ್, ಚೇತೇಶ್ವರ್ ಪೂಜಾರ ಅವರೊಂದಿಗೆ 83 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಮಯಾಂಕ್ ಔಟಾದ ನಂತರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಮುರಿಯದ 3ನೇ ವಿಕೆಟ್ ಗೆ 92 ರನ್ ಸೇರಿಸಿದ್ದು 2ನೇ ದಿನ ಆಟ ಮುಂದುವರಿಸಲಿದ್ದಾರೆ.

Brief scores
India: 215/2 in 89 overs (Mayank Agarwal 76, Cheteshwar Pujara 68 not out, Virat Kohli 47 not out; Patt Cummins 2/40)

LEAVE A REPLY

Please enter your comment!
Please enter your name here

1 + six =