ಬಾಲಿವುಡ್ ನಟಿಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕ್ಲೀನ್ ಬೌಲ್ಡ್?

0
PC: Twitter

ಬೆಂಗಳೂರು, ಸೆಪ್ಟೆಂಬರ್ 3: ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಮನ್ಸೂಲ್ ಅಲಿ ಖಾನ್ ಪಟೌಡಿ-ಶರ್ಮಿಳಾ ಠಾಗೋರ್ ಅವರಿಂದ ಹಿಡಿದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾವರೆಗೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಗಳ ಯಶಸ್ವಿ ಇನ್ನಿಂಗ್ಸ್‌ಗಳು ನಮ್ಮ ಕಣ್ಣ ಮುಂದಿವೆ. ಟೀಮ್ ಇಂಡಿಯಾದ ಪ್ರಧಾನ ಕೋಚ್ ರವಿ ಶಾಸ್ತ್ರಿ ತಮ್ಮ 56ನೇ ವಯಸ್ಸಲ್ಲಿ ಈ ಇನ್ನಿಂಗ್ಸ್‌ಗೆ ಹೊಸ ಸೇರ್ಪಡೆಯಾಗಲು ಹೊರಟಂತಿದೆ.

ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಕೂಡ ಆಗಿರುವ ಶಾಸ್ತ್ರಿ, ಬಾಲಿವುಡ್ ನಟಿ ನಿಮ್ರತ್ ಕೌರ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ತಮ್ಮ ಪತ್ನಿ ರಿತು ಅವರಿಂದ ಶಾಸ್ತ್ರಿ ದೂರವಾಗಿ 10 ವರ್ಷಗಳೇ ಕಳೆದಿವೆ. ಇದೀಗ ರವಿ ಶಾಸ್ತ್ರಿ, ಬಾಲಿವುಡ್ ಬ್ಯೂಟಿ ನಿಮ್ರತ್ ಕೌರ್ ಅವರ ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.ರವಿ ಶಾಸ್ತ್ರಿ ಈ ಹಿಂದೆ ಬಾಲಿವುಡ್ ನಟಿ ಅಮೃತಾ ಸಿಂಗ್ ಅವರೊಂದಿಗೆ ಡೇಟಿಂಗ್ ನಡೆಸಿದ್ದರು. ನಂತರ ಅಮೃತಾ ಸಿಂಗ್, ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದರು.
ರಾಜಸ್ಥಾನದವರಾದ 36 ವರ್ಷದ ನಿಮ್ರತ್ ಕೌರ್, ಏರ್‌ಲಿಫ್ಟ್ ಸಹಿತ ಹಲವಾರು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ರವಿ ಶಾಸಿ ಅವರೊಂದಿಗೆ ತಾವು ಡೇಟಿಂಗ್ ನಡೆಸುತ್ತಿರುವುದಾಗಿ ಪ್ರಕಟವಾಗಿರುವ ವರದಿಯನ್ನು ನಿಮ್ರತ್ ಕೌರ್ ಟ್ವಿಟರ್ ಮೂಲಕ ಅಲ್ಲಗಳೆದಿದ್ದಾರೆ.

 

PC: Ravi Shastri/Twitter

 

LEAVE A REPLY

Please enter your comment!
Please enter your name here

4 × 2 =