ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್: ಸಿಂಧೂ ಜಯದ ಆರಂಭ

0
PC: Twitter

ಗುವಾಂಗ್ ಜೌ, ಡಿಸೆಂಬರ್ 12: ಭಾರತದ ಟಾಪ್ ಶಟ್ಲರ್ ಪಿ.ವಿ ಸಿಂಧೂ, ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 6ನೇ Rankನ ಸಿಂಧೂ, ಹಾಲಿ ಚಾಂಪಿಯನ್ ಅಕಾನೆ ಯಮಗುಚಿ ಅವರನ್ನು 24-22, 21-15ರ ನೇರ ಗೇಮ್ ಗಳಿಂದ ಸೋಲಿಸಿದರು. ವರ್ಲ್ಡ್ ನಂ.2 ಆಟಗಾರ್ತಿ ಜಪಾನ್ ನ ಯಮಗುಚಿ ವಿರುದ್ಧ ಆತ್ಮವಿಶ್ವಾಸದ ಆಟವಾಡಿದ ಸಿಂಧೂ, ಮೊದಲ ಗೇಮ್ ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರೂ 24-22ರಲ್ಲಿ ಗೇಮ್ ಗೆದ್ದರು. ಆದರೆ 2ನೇ ಗೇಮ್ ನಲ್ಲಿ ಎದುರಾಳಿಯ ಹೋರಾಟವನ್ನು ಮೆಟ್ಟಿ ನಿಂತ ಸಿಂಧೂ, 21-15ರಲ್ಲಿ ಗೇಮ್ ಗೆದ್ದು ಪಂದ್ಯ ವಶಪಡಿಸಿಕೊಂಡರು.

LEAVE A REPLY

Please enter your comment!
Please enter your name here

2 × two =