ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್: ಸಿಂಧೂ ಚಾಂಪಿಯನ್

0
PC: Twittwr

ಗುವಾಂಗ್ ಜೌ, ಡಿಸೆಂಬರ್ 16: ಭಾರತದ ಅಗ್ರಮಾನ್ಯ ಶಟ್ಲರ್ ಪಿ.ವಿ ಸಿಂಧೂ, ಚೊಚ್ಚಲ ಬಿಡಬ್ಲ್ಯುಎಫ್ ವರ್ಲ್ಡ್ ಸೀರೀಸ್ ಫೈನಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧೂ, ಜಪಾನ್ ನ ನಜೋಮಿ ಒಕುಹಾರ ಅವರನ್ನು 21-19, 21-17ರ ನೇರ ಗೇಮ್ ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
23 ವರ್ಷದ ಸಿಂಧೂ, ಸೆಮಿಫೈನಲ್ ನಲ್ಲಿ ಥಾಯ್ಲೆಂಡ್ ನ ರಚನಕ್ ಇಂಟಾನನ್ ಅವರನ್ನು 21-16, 25-23ರಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ವಿಶ್ವದ 6ನೇ rankನ ಸಿಂಧೂ, ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ನಲ್ಲಿ ಎರಡು ಬಾರಿ ಸೋಲು ಅನುಭವಿಸಿದ್ದರು.

 

LEAVE A REPLY

Please enter your comment!
Please enter your name here

five × 1 =