ಬೌಲಿಂಗ್ ಮಾಡ್ತೀಯಾ ಇಲ್ಲಾ ಬೌಲರ್ ಚೇಂಜ್ ಮಾಡ್ಲಾ? ಕುಲ್‌ದೀಪ್‌ಗೆ ಧೋನಿ ಆವಾಜ್!

0

ದುಬೈ, ಸೆಪ್ಟೆಂಬರ್ 26: ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದವರು. ಎಂತಹ ಪರಿಸ್ಥಿತಿಯಲ್ಲೂ ಧೋನಿ ತಾಳ್ಮೆ ಕಳೆದುಕೊಳ್ಳುವವರಲ್ಲ. ಆದರೆ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಹಂಗಾಮಿ ನಾಯಕನಾಗಿ 200ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಧೋನಿ ತಾಳ್ಮೆ ಕಳೆದುಕೊಂಡಿದ್ದರು.
ಧೋನಿ ತಾಳ್ಮೆ ಕಳೆದುಕೊಳ್ಳಲು ಕಾರಣ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್. ಬೌಲಿಂಗ್ ಮಾಡುತ್ತಿದ್ದ ಕುಲ್ದೀಪ್ ಕ್ಷೇತ್ರರಕ್ಷಣೆ ನಿಯೋಜನೆ ಮಾಡಲು ಮುಂದಾಗಿದ್ದು ಧೋನಿಗೆ ಕೋಪ ತರಿಸಿತು. ಬೌಲರ್ ಒಬ್ಬ ತನಗೆ ಬೇಕಾದ ಫೀಲ್ಡ್ ಸೆಟ್ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಕುಲ್ದೀಪ್ ಯಾದವ್ ಮಾತ್ರ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಫೀಲ್ಡ್ ಸೆಟ್ ಮಾಡಲು ವಿನಿಯೋಗಿಸಿದರು. ಅವನನ್ನು ಇಲ್ಲಿ ಹಾಕಿ, ಇವನನ್ನು ಅಲ್ಲಿ ಹಾಕಿ ಎಂದು ಅನವಶ್ಯಕವಾಗಿ ಸಮಯ ಹಾಳು ಮಾಡುತ್ತಿದ್ದುದನ್ನು ನೋಡಿದ ಧೋನಿಗೆ ಸಿಟ್ಟು ನೆತ್ತಿಗೇರಿ ಒಂದೇ ಒಂದು ಆವಾಜ್ ಬಿಟ್ಟರು. ಧೋನಿ ಆವಾಜ್‌ಗೆ ಬೆಚ್ಚಿದ ಕುಲ್ದೀಪ್ ಮರು ಮಾತಿಲ್ಲದೆ ಬೌಲಿಂಗ್ ಆರಂಭಿಸಿದರು.
‘ಬೌಲಿಂಗ್ ಮಾಡ್ತೀಯಾ ಇಲ್ಲಾ ಬೌಲರ್ ಚೇಂಜ್ ಮಾಡ್ಲಾ’ ಎಂದು ಕುಲ್ದೀಪ್ ಗೆ ಧೋನಿ ಹಾಕಿದ ಆವಾಜ್ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.

ಧೋನಿ ಆವಾಜ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

twenty − 18 =