ಬ್ಯಾಡ್ಮಿಂಟನ್ ದಿಗ್ಗಜ ಲೀ ಚಾಂಗ್ ವೇಗೆ ಕ್ಯಾನ್ಸರ್

0
PC: Twitter

ಕೌಲಾಲಂಪುರ್, ಸೆಪ್ಟೆಂಬರ್ 23: ಮಲೇಷ್ಯಾದ ಬ್ಯಾಡ್ಮಿಂಟನ್ ದಿಗ್ಗಜ, ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ತಲಾ 3 ಬಾರಿ ಬೆಳ್ಳಿ ಪದಕ ಗೆದ್ದಿರುವ ಲೀ ಚಾಂಗ್ ವೇ ಮೂಗಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
35 ವರ್ಷದ ಚಾಂಗ್ ವೇ ಮೂಗಿನ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿದ್ದು, ತೈವಾನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಬಾರಿಯ ಮಲೇಷ್ಯಾ ಓಪನ್ ಚಾಂಪಿಯನ್ ಲೀ ಚಾಂಗ್ ವೇ ಬ್ಯಾಡ್ಮಿಂಟನ್ ದಂತಕತೆಯಾಗಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನದ ಪದಕ ಗೆದ್ದಿರುವ ಚಾಂಗ್ ವೇ 2008, 2012 ಮತ್ತು 2016ರ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದರೂ, ಚಿನ್ನದ ಪದಕ ಗೆಲ್ಲುವ ಕನಸು ನನಸಾಗಿಲ್ಲ. ಅಂತೆಯೇ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲೂ (2011, 2013, 2015) 3 ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
‘ನನಗಾಗಿ ಕಾಯಿರಿ. ಮತ್ತೆ ಬ್ಯಾಡ್ಮಿಂಟನ್ ಅಂಗಣಕ್ಕೆ ಮರಳುತ್ತೇನೆ. ನನ್ನ ಬಗೆಗಿನ ಕಾಳಜಿಗಾಗಿ ಕೃತಜ್ಞತೆಗಳು, ’’ ಎಂದು ತೈವಾನ್ ಆಸ್ಪತ್ರೆಯಿಂದ ಲೀ ಚಾಂಗ್ ವೇ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here

7 − two =