ಬ್ಯಾಡ್ಮಿಂಟನ್: ಮಾಣಿಕ್ಯ, ಮಯಾಂಕ್ ಸಹೋದರರಿಗೆ ಪ್ರಶಸ್ತಿ

0

ಬೆಂಗಳೂರು, ಸೆಪ್ಟೆಂಬರ್ 23: ಉದಯೋನ್ಮುಖ ಬ್ಯಾಡ್ಮಿಂಟನ್ ಸಹೋದರರಾದ ಮಯಾಂಕ್ ಅಡಿಗ ಮತ್ತು ಮಾಣಿಕ್ಯ ಅಡಿಗ, ವಿ.ಕೆ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಇಲ್ಲಿನ ಕಗ್ಗದಾಸಪುರದಲ್ಲಿರುವ ವಿಕೆ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 11 ವರ್ಷದೊಳಗಿನವರ ವಿಭಾಗದಲ್ಲಿ ಮಯಾಂಕ್ ಅಡಿಗ ಮತ್ತು 13 ವರ್ಷದೊಳಗಿನವರ ವಿಭಾಗದಲ್ಲಿ ಮಾಣಿಕ್ಯ ಅಡಿಗ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅಲ್ಲದೆ ಈ ಸಹೋದರರನ್ನು ಉದಯೋನ್ಮುಖ ಆಟಗಾರರೆಂದು ಗುರುತಿಸಿ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

nineteen − nineteen =