ಬ್ಯಾಡ್ಮಿಂಟನ್: ಸಿಂಧೂಗೆ ಸೋಲುಣಿಸಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದ ಸೈನಾ

0
PC: Saina/Twitter

ಗುವಾಹಟಿ, ಫೆಬ್ರವರಿ 16: ಖ್ಯಾತ ಶಟ್ಲರ್ ಸೈನಾ ನೆಹ್ವಾಲ್ 83ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಪಿ.ವಿ ಸಿಂಧೂ ಅವರನ್ನು ಸೋಲಿಸಿ 4ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಸೈನಾ, ಸಿಂಧೂ ಅವರನ್ನು 21-18, 21-15ರಿಂದ ಸೋಲಿಸಿ ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದರು. ಕಳೆದ ವರ್ಷದ ಫೈನಲ್ ನಲ್ಲೂ ಸಿಂಧೂ ಅವರನ್ನು ಸೋಲಿಸಿ ಸೈನಾ ಪ್ರಶಸ್ತಿ ಗೆದ್ದಿದ್ದರು.

ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಲಕ್ಷ್ಯ ಸೇನ್ ಅವರನ್ನು ಮಣಿಸುವ ಮೂಲಕ ಸೌರಭ್ ವರ್ಮಾ ಸತತ 3ನೇ ಬಾರಿ ಪ್ರಶಸ್ತಿ ಗೆದ್ದರು. ಚಾಂಪಿಯನ್ಸ್ ಗೆ 3.25 ಲಕ್ಷ ಹಾಗೂ ರನ್ನರ್ಸ್ ಅಪ್ ಗಳಿಗೆ 1.70 ಲಕ್ಷ ರೂ. ನಗದು ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here

11 + two =