ಭಾರತ ಅಂಡರ್-19 ತಂಡಕ್ಕೆ ಜಯ ತಂದ ಕನ್ನಡಿಗ ಶುಭಾಂಗ್ ಹೆಗ್ಡೆ

0

ಲಖನೌ, ಸೆಪ್ಟೆಂಬರ್ 12: ಕರ್ನಾಟಕದ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ ನೇಪಾಳ 19 ವರ್ಷದೊಳಗಿನವರ ತಂಡದ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಭಾರತದ 19 ವರ್ಷದೊಳಗಿನವರ ತಂಡಕ್ಕೆ ಭರ್ಜರಿ ಪದಾರ್ಪಣೆ ಮಾಡಿದ್ದಾರೆ. ಶುಭಾಂಗ್ (3/29) ಅವರ ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಭಾರತದ 19 ವರ್ಷದೊಳಗಿನವರ ‘ಬಿ’ ತಂಡ ಚತುಷ್ಕೋನ ಕ್ರಿಕೆಟ್ ಏಕದಿನ ಸರಣಿಯಲ್ಲಿ ನೇಪಾಳ ವಿರುದ್ಧ 40 ರನ್‌ಗಳ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತದ ಕಿರಿಯರ ‘ಬಿ’ ತಂಡ 49 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ನೇಪಾಳದ ಕಿರಿಯರ ತಂಡ 41.3 ಓವರ್‌ಗಳಲ್ಲಿ 121 ರನ್‌ಗಳಿಗೆ ಕುಸಿದು ಆತಿಥೇಯರಿಗೆ ಶರಣಾಯಿತು. ಅಮೋಘ ಬೌಲಿಂಗ್ ಪ್ರದರ್ಶಿಸಿದ ಶುಭಾಂಗ್ ಹೆಗ್ಡೆ 10 ಓವರ್‌ಗಳಲ್ಲಿ 1 ಮೇಡನ್ ಸಹಿತ 29 ರನ್ನಿತ್ತು 3 ವಿಕೆಟ್ ಪಡೆದು ಮಿಂಚಿದರು.

ಶುಭಾಂಗ್ ಹೆಗ್ಡೆ

2020ರ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆಗಳು ಶುಭಾಂಗ್ ಅವರಲ್ಲಿದ್ದು, ಕರ್ನಾಟಕದ ಕಿರಿಯರ ತಂಡಗಳ ಪರ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಎಡಗೈ ಸ್ಪಿನ್ ದಾಳಿ ಅಷ್ಟೇ ಅಲ್ಲದೆ, ಎಡಗೈ ಬ್ಯಾಟಿಂಗ್ ಮೂಲಕವೂ ಶುಭಾಂಗ್ ಉತ್ತಮ ಆಟವಾಡಬಲ್ಲ ಪ್ರತಿಭಾವಂತ ಆಲ್‌ರೌಂಡರ್ ಆಗಿದ್ದಾರೆ.

Brief scores
India U19 B: 161 all out in 49 overs (Qamral Iqbal 50, Rishabh Chouhan 19; Kamal S. Airee 3/31, Pawan Sarraf 2/31).
Nepal U19: 121 all out in 41.3 overs (Bhim Sharki 30, Kamal S. Airee 22; Shubhang Hegde 3/29, Pankaj Yadav 3/22, Sahil Raj 2/20).

LEAVE A REPLY

Please enter your comment!
Please enter your name here

5 + 13 =