ಭಾರತ ‘ಎ’ ಹಾಗೂ ‘ಬಿ’ ತಂಡಗಳಿಗೆ ರಾಯುಡು, ಜಾಧವ್ ಸೇರ್ಪಡೆ

0
PC: Jadhav/Rayudu/Twitter

ಬೆಂಗಳೂರು: ಆಸ್ಟ್ರೇಲಿಯಾ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಕ್ರಿಕೆಟ್
ಸರಣಿಗೆ ಭಾರತ ‘ಎ’ ಹಾಗೂ ಭಾರತ ‘ಬಿ’ ತಂಡಗಳಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಮುಂಬೈ
ಬ್ಯಾಟ್ಸ್‌ಮನ್ ಸಿದ್ದೇಶ್ ಲಾಡ್ ಅವರ ಬದಲು ಅನುಭವಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅವರನ್ನು ಭಾರತ ‘ಎ’
ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಹೈದರಾಬಾದ್‌ನ ರಿಕಿ ಭುಯಿ ಬದಲು ಮಹಾರಾಷ್ಟ್ರದ ಕೇದಾರ್ ಜಾಧವ್ ಅವರನ್ನು
ಭಾರತ ‘ಬಿ’ ತಂಡಕ್ಕೆ ಸೇರಿಸಲಾಗಿದೆ. ಸಿದ್ದೇಶ್ ಲಾಡ್ ಮತ್ತು ರಿಕಿ ಭುಯಿ ಅವರನ್ನು ದುಲೀಪ್ ಟ್ರೋಫಿ ಟೂರ್ನಿಯಲ್ಲಿ
ಆಡುತ್ತಿರುವ ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ತಂಡಗಳಿಗೆ ಸೇರ್ಪಡೆಗೊಳಿಸಲಾಗಿದೆ.

LEAVE A REPLY

Please enter your comment!
Please enter your name here

one × 5 =