ಭಾರತ ತಂಡಕ್ಕೆ ಗುರು ರಾಹುಲ್ ಕೋಚ್, ಶಿಷ್ಯ ರಾಹುಲ್ ಕ್ಯಾಪ್ಟನ್..!

0
PC: Twitter

ಬೆಂಗಳೂರು, ಫೆಬ್ರವರಿ 7: ಭಾರತ ತಂಡಕ್ಕೀಗ ಗುರು-ಶಿಷ್ಯರು ಕೋಚ್ ಮತ್ತು ಕ್ಯಾಪ್ಟನ್ಸ್. ಹಾಗಂತ ಇದು ಭಾರತ ತಂಡವಲ್ಲ, ಭಾರತ ‘ಎ’ ತಂಡ. ಹೌದು. ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಲಾಗಿರುವ ಭಾರತ ‘ಎ’ ತಂಡಕ್ಕೆ ಕೆ.ಎಲ್ ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಗುರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ತಂಡವನ್ನು ಶಿಷ್ಯ ರಾಹುಲ್ ಮುನ್ನಡೆಸಲಿದ್ದಾರೆ. ನಾಲ್ಕು ದಿನಗಳ ಈ ಪಂದ್ಯ ಫೆಬ್ರವರಿ 13ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ತಂಡದಲ್ಲಿ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್ ಮನ್ ಕರುಣ್ ನಾಯರ್ ಕೂಡ ಇದ್ದಾರೆ.

ಭಾರತ ‘ಎ’ ತಂಡ: ಕೆ.ಎಲ್ ರಾಹುಲ್(ನಾಯಕ), ಎಆರ್ ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಬಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ದೇಶ್ ಲಾಡ್, ಕೆಎಸ್ ಭರತ್(ವಿಕೆಟ್ ಕೀಪರ್), ಶಹಬಾಜ್ ನದೀಮ್, ಜಲಜ್ ಸಕ್ಸೇನ, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವರುಣ್ ಆ್ಯರೋನ್.

LEAVE A REPLY

Please enter your comment!
Please enter your name here

5 + 14 =