ಭಾರತ ಕ್ರಿಕೆಟ್ ತಂಡಕ್ಕೆ ಬೇಕಿರುವುದು ರಚನಾತ್ಮಕ ಟೀಕೆ

0
Team India. PC: BCCI/Twitter

ವಿಶ್ವಾಸ್ ಶೆಟ್ಟಿ | ಕ್ರಿಕೆಟ್ ವಿಶ್ಲೇಷಕ

ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಟೆಸ್ಟ್ ಸರಣಿಯನ್ನು ಆತಿಥೇಯರು 4-1 ಅಂತರದಲ್ಲಿ ಗೆದ್ದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ಹಾಗೂ ಭಾರತೀಯ ಅಭಿಮಾನಿಗಳಿಗೆ ಇದು ಕಹಿ ಮಾತ್ರೆ ನುಂಗಿದ ಅನುಭವ.
ಭಾರತ ತಂಡದ ಶೋಚನೀಯ ಪ್ರದರ್ಶನದ ನಂತರ ಅರ್ಥವಾಗುವುದೇನೆಂದರೆ ಕೆಲ ವಿಷಯಗಳು ಬದಲಾಗಲು ಸಾಧ್ಯವೇ ಇಲ್ಲ. ‘ತಜ್ಞರು’ ಎಂದೇ ಕರೆಯಲ್ಪಡುವ ಕ್ರಿಕೆಟ್ ವಿಶ್ಲೇಷಕರು ತಂಡದ ಪ್ರದರ್ಶನವನ್ನು ಟೀಕಿಸುವ ಅವಕಾಶವನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ವಿರಾಟ್ ಕೊಹ್ಲಿ ಅವರ ನಾಯಕತ್ವದಿಂದ ಆರಂಭವಾಗಿ ತರಬೇತಿ ಸಿಬ್ಬಂದಿ ಹಾಗೂ ಇನ್ನು ಕೆಲ ಸಂಗತಿಗಳು ಇಂಗ್ಲಿಷರ ವಿರುದ್ಧ ಭಾರತದ ಸೋಲಿಗೆ ಕಾರಣವಾದವು ಎಂಬ ಟೀಕೆಗಳು ಕೇಳಿ ಬರುತ್ತಿವೆ. ತಮಾಷೆಯ ಸಂಗತಿಯೆಂದರೆ ಇದೇ ತಂಡ ಸರಣಿ ಗೆಲುವು ತಂದುಕೊಟ್ಟರೆ ಆಟಗಾರರನ್ನು ನಾವು ದಿನ ಬೆಳಗಾಗುವುದರೊಳಗೆ ದೇವತೆಗಳನ್ನಾಗಿಸುತ್ತೇವೆ.
ಕ್ರೀಡೆಯಲ್ಲಿ ನಾವು ಯಾವಾಗಲೂ ಬಯಸುವ ಫಲಿತಾಂಶ ಎಲ್ಲಾ ಸಂದರ್ಭಗಳಲ್ಲೂ ಸಿಗಲಾರದು ಎಂಬ ಸತ್ಯವನ್ನು ಅರಿತುಕೊಳ್ಳುವುದು ಕಷ್ಟ. ಹೌದು, ಕ್ರೀಡೆಯ ಮೇಲೆ ಪ್ರೀತಿ, ದೃಢತೆ ಮತ್ತು ಬದ್ಧತೆ ಇಲ್ಲವಾದಲ್ಲಿ ನಾವು ತಂಡ ಮತ್ತು ಆಟಗಾರರನ್ನು ಟೀಕೆ ಮಾಡುವುದರಲ್ಲಿ ತಪ್ಪಿಲ್ಲ.

PC: Twitter

ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ತಮ್ಮ ಸಾಮರ್ಥ್ಯದ ಹೊಳಪನ್ನು ತೋರಿಸಿದರು. ಆದರೆ ಪ್ರಮುಖ ಘಟ್ಟಗಳಲ್ಲಿ ತಮ್ಮ ಉತ್ತಮ ಆಟವನ್ನು ಹೊರತರುವಲ್ಲಿ ವಿಫಲರಾದರು. ತಂಡದ ಹೆಚ್ಚಿನ ಆಟಗಾರರು ತಮ್ಮ ಶ್ರೇಷ್ಠ ಆಟವಾಡಿದ ಕಾರಣದಿಂದಲೇ ಹೆಚ್ಚಿನ ಪಂದ್ಯಗಳು ರೋಚಕ ಘಟ್ಟ ತಲುಪಿದವು.
ಆದರೆ ನಮ್ಮ ತಂಡ ಕಲಿಯುವಂಥದ್ದು ಏನೂ ಇಲ್ಲ, ನಮ್ಮ ತಂಡ ಏನೂ ತಪ್ಪು ಮಾಡಿಲ್ಲವೆಂಬುದು ಇದರ ಅರ್ಥವೇ? ಖಂಡಿತಾ ಅಲ್ಲ. ತಂಡ ಮತ್ತು ನಾಯಕನಿಂದ ಕೆಲ ತಪ್ಪುಗಳಾದವು. ನಮ್ಮಿಂದ ಕೆಲ ತಪ್ಪುಗಳಾಗಿದ್ದು, ಅವುಗಳಿಂದ ನಾವು ಪಾಠ ಕಲಿಯಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಕೆಲ ತಪ್ಪುಗಳಿಂದ ಸರಣಿ ಸೋಲುವಂತಾಯಿತು ಎಂದು ಒಪ್ಪಿಕೊಂಡಿದ್ದಾರೆ.
29ನೇ ವಯಸ್ಸಲ್ಲೇ ದಂತಕತೆ ಎಂದು ಕರೆಸಿಕೊಂಡಿರುವ ನಾಯಕನನ್ನು ನಾವು ಹೊಂದಿದ್ದೇವೆ. ನಾಯಕನಾಗಿ ಅವರು ಅದ್ಭುತ ಹಾಗೂ ಅಮೋಘ ಪ್ರದರ್ಶನವನ್ನು ತೋರಿದ್ದಾರೆ. ಖಂಡಿತವಾಗಿಯೂ ಅವರು ಪ್ರಬುದ್ಧತೆ ಮತ್ತು ಅನುಭವದಿಂದ ಇನ್ನೂ ಉತ್ತಮ ನಾಯಕರಾಗಲಿದ್ದಾರೆ. ಆದರೆ ಅವರೆಡೆಗಿನ ನಿರಂತರ ತಿರಸ್ಕಾರ ಮನೋಭಾವ ನಿಲ್ಲಲೇಬೇಕು.

ಗೆಲುವಿನ ತಂಡ ಸಂಯೋಜನೆಯನ್ನು ಪಡೆಯಲು ಕೊಹ್ಲಿ ಉತ್ಕಟವಾದ ಪ್ರಯತ್ನಗಳನ್ನು ಮಾಡುತ್ತಾರೆ ಆದರೆ ಅದು ತಂಡಕ್ಕೆ ತಿರುಗುಬಾಣವಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಅವರ ದಿಟ್ಟ ಮತ್ತು ಆಕ್ರಮಣಕಾರಿ ಮಮೋಭಾವ ಕೆಲಸ ಮಾಡದಿದ್ದರೂ, ದಿಟ್ಟ ಮತ್ತು ಆಕ್ರಮಣಕಾರಿ ತಂಡ ಸಂಯೋಜನೆಯನ್ನು ತೋರಿಸಿದ್ದಾರೆ. ಈ ನಿರ್ಧಾರಗಳು ತಮ್ಮದೇ ಆದ ಅಪಾಯಗಳನ್ನೂ ಹೊಂದಿರುತ್ತವೆ. ಆದರೆ ತನ್ನ ಅತ್ಯುತ್ತಮ ಆಟವನ್ನು ತಂಡಕ್ಕಾಗಿ ಹೊರ ತರುವ ನಾಯಕನ ಬಲ ತಂಡಕ್ಕಿದೆ.

ಕೋಚ್ ರವಿ ಶಾಸ್ತ್ರಿ ಮತ್ತು ಅಜಿಂಕ್ಯ ರಹಾನೆ PC: BCCI

ಈ ದೇಶದಲ್ಲಿ ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯಗಳಿವೆ ಮತ್ತು ನಮ್ಮ ತಂಡ ಸತತವಾಗಿ ಗೆಲ್ಲುತ್ತಿರಬೇಕೆಂದು ಬಯಸುವುದರಲ್ಲಿ ಯಾವ ತಪ್ಪೂ ಇಲ್ಲ. ಇದು ಸಾಧ್ಯವಾಗಬೇಕಾದರೆ ತಂಡ ತಪ್ಪು ದಾರಿಯಲ್ಲಿ ನಡೆದಾಗ ಟೀಕೆಗಳಿಂದ ತಂಡವನ್ನು ದುರ್ಬಲಗೊಳಿಸುವ ಬದಲು ರಚನಾತ್ಮಕ ಟೀಕೆಗಳಿಂದಷ್ಟೇ ತಂಡಕ್ಕೆ ನಾವು ನೆರವಾಗಬಹುದು.
ಭಾವನಾತ್ಮಕ ವ್ಯಕ್ತಿಯಾಗಿರುವ ವಿರಾಟ್ ಕೊಹ್ಲಿಗೆ, ತರಬೇತಿ ಸಿಬ್ಬಂದಿಯೂ ಸೇರಿದಂತೆ ತಂಡಕ್ಕೆ ಖಂಡಿತವಾಗಿಯೂ ನೋವಾಗಿರುತ್ತದೆ. ಆಟಗಾರರನ್ನು ಮತ್ತು ಅವರ ಸಾಮರ್ಥ್ಯವನ್ನು ನಿರಂತರವಾಗಿ ಪ್ರಶ್ನಿಸುವುದರಿಂದ ತಂಡಕ್ಕೆ ನಮ್ಮಿಂದ ಯಾವ ನೆರವೂ ಸಿಗುವುದಿಲ್ಲ.
ಇದು ನಮ್ಮ ತಂಡ ಮತ್ತು ವಿರಾಟ್ ಕೊಹ್ಲಿ ನಮ್ಮ ತಂಡದ ನಾಯಕ. ವೈಫಲ್ಯದ ಈ ಹಂತ ಸುದೀರ್ಘ ಅವಗೆ ಮುಂದುವರಿದರೆ ಖಂಡಿತಾ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲಿಯವರೆಗೆ ನಮ್ಮ ಹುಡುಗರು ಮತ್ತು ನಾಯಕನಿಗೆ ಬೆಂಬಲ ನೀಡೋಣ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ಆಸ್ಟ್ರೇಲಿಯಾ ಸರಣಿ ಬರಲಿದೆ.

LEAVE A REPLY

Please enter your comment!
Please enter your name here

7 − one =