ಭಾರತ ಬಿ ತಂಡಕ್ಕೆ ಚಾಂಪಿಯನ್ ಪಟ್ಟ, ಮನೀಶ್ ಪಾಂಡೆ ಪಂದ್ಯಶ್ರೇಷ್ಠ

0
PC: BCCI/Domestic

ಬೆಂಗಳೂರು, ಆಗಸ್ಟ್ 28: ನಾಯಕ ಮನೀಶ್ ಪಾಂಡೆ (77*), ಮಯಾಂಕ್ ಅಗರ್ವಾಲ್(69) ಮತ್ತು ಶುಭಮನ್ ಗಿಲ್(66*) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎ ತಂಡವನನ್ನು 9 ವಿಕೆಟ್‌ಗಳಿಂದ ಸೋಲಿಸಿದ ಭಾರತ ಬಿ ತಂಡ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಎ ತಂಡ, 47.5 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟಾಯಿತು. ಭಾರತ ಬಿ ತಂಡದ ಪರ ಕರ್ನಾಟಕದ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್(3/50) 3 ವಿಕೆಟ್ ಕಬಳಿಸಿದರು.
ನಂತರ ಟಾರ್ಗೆಟ್ ಚೇಸ್ ಮಾಡಿದ ಭಾರತ ಬಿ ತಂಡ 36.3 ಓವರ್‌ಗಳಲ್ಲಿ 1 ವಿಕೆಟ್‌ಗೆ 230 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಿತು. ಮನೀಶ್ ಪಾಂಡೆ 54 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರೆ, ಮಯಾಂಕ್ ಅಗರ್ವಾಲ್ 67 ಎಸೆತಗಳಲ್ಲಿ 9 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ನೆರವಿನಿಂದ 69 ರನ್ ಹಾಗೂ ಶುಭಮನ್ ಗಿಲ್ 84 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 66 ರನ್ ಗಳಿಸಿದರು. ಬಿರುಸಿನ ಆಟವಾಡಿ ಭಾರತ ಬಿ ತಂಡದ ಗೆಲುವಿಗೆ ಕಾರಣರಾದ ಮನೀಶ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Brief score

Australia A: 225 all out in 47.5 overs (D’Arcy Short 72, Alex Carey 53; Shreyas Gopal 3/50, Siddharth Kaul 2/24, Navdeep Saini 2/33).

India B: 230/1 in 36.3 overs (Mayank Agarwal 69, Shubhman Gill 66 not out, Manish Pandey 73 not out; Ashton Agar 1/59).

LEAVE A REPLY

Please enter your comment!
Please enter your name here

thirteen − 5 =