ಮತ್ತೆ ಬಂತು ಪ್ರೊ ಕಬಡ್ಡಿ: ಸೂಪರ್ ಸಂಡೇ ತಲೈವಾಸ್ Vs ಪೈರೇಟ್ಸ್

0

ಬೆಂಗಳೂರು, ಅಕ್ಟೋಬರ್ 5: ಕ್ರಿಕೆಟ್ ಹೊರತು ಪಡಿಸಿದರೆ ದೇಶದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದೆ. ಅಕ್ಟೋಬರ್ 7ರಂದು ಟೂರ್ನಿ ಚೆನ್ನೈನಲ್ಲಿ ಆರಂಭವಾಗಲಿದ್ದು, 6ನೇ ಆವೃತ್ತಿಯನ್ನು ಟ್ರೋಫಿಯನ್ನು ಶುಕ್ರವಾರ ಚೆನ್ನೈನಲ್ಲಿ ಅನಾವರಣಗೊಳಿಸಲಾಗಿದೆ.
ಅಕ್ಟೋಬರ್ 7ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತಮಿಳ್ ತಲೈವಾಸ್ ಮತ್ತು ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿವೆ. ತಮಿಳ್ ತಲೈವಾಸ್ ತಂಡವನ್ನು ಭಾರತ ತಂಡದ ನಾಯಕ ಅಜಯ್ ಠಾಕೂರ್ ಮುನ್ನಡೆಸಲಿದ್ದರೆ, ಪಟ್ನಾ ಪೈರೇಟ್ಸ್ ತಂಡವನ್ನು ಪ್ರದೀಪ್ ನರ್ವಾಲ್ ಮುನ್ನಡೆಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ತಮಿಳು ನಟ ವಿಜಯ್ ಹಾಗೂ ನಟಿ ಶ್ರುತಿ ಹಾಸನ್ ಭಾಗವಹಿಸಲಿದ್ದಾರೆ. ಟೂರ್ನಿ ಅಕ್ಟೋಬರ್ 7ರಿಂದ ಜನವರಿ 5ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here

15 + 14 =