ಮಯಾಂಕ್ ಅಗರ್ವಾಲ್‌ಗೆ CEAT ಬ್ಯಾಟ್ ಸ್ಪಾನ್ಸರ್‌ಷಿಪ್

0

ಬೆಂಗಳೂರು, ಫೆಬ್ರವರಿ 12: ಕರ್ನಾಟಕದ ಭರವಸೆಯ ಓಪನರ್ ಮಯಾಂಕ್ ಅಗರ್ವಾಲ್ ಅವರಿಗೆ ಸಿಯೆಟ್ ಸಂಸ್ಥೆಯ ಬ್ಯಾಟ್ ಪ್ರಾಯೋಜಕತ್ವ ಲಭಿಸಿದೆ.

ಸಿಯೆಟ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುಲ ಮಯಾಂಕ್ ‘’ಇದೊಂದು ಹೆಮ್ಮೆಯ ಕ್ಷಣ. ಇಂತಹ ಬ್ರ್ಯಾಂಡ್ ಪ್ರತಿನಿಧಿಸುತ್ತಿರುವುದಕ್ಕೆ ಸಂತಸವಾಗಿದೆ’’ ಎಂದಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಚೊಚ್ಚಲ ಟೆಸ್ಟ್ ನಲ್ಲೇ 76 ರನ್ ಗಳಿಸಿ ಮಿಂಚಿದ್ದರು. ಆದರೆ ಆಗ ಮಯಾಂಕ್ ಗೆ ಯಾವುದೇ ಬ್ಯಾಟ್ ಪ್ರಾಯೋಜಕರು ಇರಲಿಲ್ಲ. ಇದೀಗ ಸಿಯೆಟ್ ಪ್ರಾಯೋಜಕತ್ವದೊಂದಿಗೆ ಇರಾನಿ ಕಪ್ ನಲ್ಲಿ ಆಡುತ್ತಿದ್ದಾರೆ.

ಭಾರತ ಸೀಮಿತ ಓವರ್ ಗಳ ತಂಡದ ಉಪನಾಯಕ ರೋಹಿತ್ ಶರ್ಮಾ, ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಶುಭಮನ್ ಗಿಲ್, ಇಶಾನ್ ಕಿಶನ್, ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸಿಯೆಟ್ ಬ್ಯಾಟ್ ಪ್ರಾಯೋಜಕತ್ವ ಹೊಂದಿದ್ದಾರೆ.

LEAVE A REPLY

Please enter your comment!
Please enter your name here

6 + 8 =