ಮಯಾಂಕ್ ಕೈತಪ್ಪಿದ ಶತಕ, ಅಧ್ಯಕ್ಷರ XI ಉತ್ತಮ ಮೊತ್ತ

0
PC: BCCI

ವಡೋದರ, ಸೆಪ್ಟೆಂಬರ್ 29: ಭಾರತ ತಂಡದ ಕದ ತಟ್ಟುತ್ತಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2 ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಕೇವಲ 10 ರನ್‌ಗಳಿಂದ ಶತಕ ವಂಚಿತರಾಗಿದ್ದಾರೆ.
ಇಲ್ಲಿನ ರಿಲಯನ್ಸ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿಸಿಸಿಐ-ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ ಪ್ರಥಮ ದಿನದಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 360 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.
ಮಯಾಂಕ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮುಂಬೈನ ಯುವ ಓಪನರ್ ಪೃಥ್ವಿ ಶಾ ಕೇವಲ 8 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ(3) ಮತ್ತು ನಾಯಕ ಕರುಣ್ ನಾಯರ್(29) ಎಡವಿದರೆ, ವಿಂಡೀಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಯಾಂಕ್ 111 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನೊಳಗೊಂಡ 90 ರನ್ ಗಳಿಸಿ ಔಟಾದರು.
5ನೇ ಕ್ರಮಾಂಕದಲ್ಲಿ ಮುಂಬೈನ ಶ್ರೇಯಸ್ ಅಯ್ಯರ್ 64 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ ಬಿರುಸಿನ 61 ರನ್ ಗಳಿಸಿದರೆ, ಉತ್ತಮ ಫಾರ್ಮ್‌ನಲ್ಲಿರುವ ಮಹಾರಾಷ್ಟ್ರ ಬ್ಯಾಟ್ಸ್‌ಮನ್ ಅಂಕಿತ್ ಬಾವ್ನೆ ಅಜೇಯ 116 ರನ್ ಗಳಿಸಿದರು.

Brief scores
Indian Board President’s XI: 360/6d in 90 overs (Mayank Agarwal 90, Karun Nair 29, Shreyas Iyer 61, Ankit Bawne 116 not out; Shannon Gabriel 2/41, Devendra Bishoo 3/104).

LEAVE A REPLY

Please enter your comment!
Please enter your name here

7 − 6 =