ಮಯಾಂಕ್ ಟೆಸ್ಟ್ ಪದಾರ್ಪಣೆಯ ಬಗ್ಗೆ ರಾಹುಲ್ ಏನಂದ್ರು ಗೊತ್ತಾ..?

0

ಮೆಲ್ಬರ್ನ್, ಡಿಸೆಂಬರ್ 26: ಕನ್ನಡಿಗ ಮಯಾಂಕ್ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಬುಧವಾರ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ ಚೊಚ್ಚಲ ಇನ್ನಿಂಗ್ಸ್ ನಲ್ಲೇ ಮಿಂಚಿ 76 ರನ್ ಗಳಿಸಿದ್ದಾರೆ.

PC: BCCI

ಅಂದ ಹಾಗೆ ಮಯಾಂಕ್ ಅಗರ್ವಾಲ್ ಸ್ಥಾನ ಪಡೆಯಲು ಕಾರಣ, ಮತ್ತೊಬ್ಬ ಕನ್ನಡಿಗ ಕೆ.ಎಲ್ ರಾಹುಲ್ ಅವರ ಕಳಪೆ ಫಾರ್ಮ್. ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ರಾಹುಲ್ ವಿಫಲರಾಗಿದ್ದರಿಂದ ಮಯಾಂಕ್ ಅವಕಾಶ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್ ಟೆಸ್ಟ್ ಪದಾರ್ಪಣೆಯ ಬಗ್ಗೆ ರಾಹುಲ್ ಟ್ವಿಟರ್ ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
‘’ನನ್ನ ಅತ್ಯುತ್ತಮ ಸ್ನೇಹಿತ ಟೆಸ್ಟ್ ಕ್ಯಾಪ್ ಸ್ವೀಕರಿಸಿದ್ದು ಮತ್ತು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದನ್ನು ಕಂಡು ನನಗೆ ಅತ್ಯಂತ ಖುಷಿಯಾಯಿತು. ಅಷ್ಟೇ ಅಲ್ಲ ಹೆಮ್ಮೆಯಾಗುತ್ತಿದೆ’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮಯಾಂಕ್ ಅವರನ್ನು ಅಭಿನಂದಿಸುತ್ತಿರುವ ಚಿತ್ರಗಳನ್ನೂ ಪ್ರಕಟಿಸಿದ್ದಾರೆ.
ರಾಹುಲ್ ಮತ್ತು ಮಯಾಂಕ್ ಜ್ಯೂನಿಯರ್ ಕ್ರಿಕೆಟ್ ದಿನಗಳಿಂದಲೂ ಒಟ್ಟಾಗಿಯೇ ಆಡಿದವರು. ಮಯಾಂಕ್, ರಾಹುಲ್ ಮತ್ತು ಕರುಣ್ ನಾಯರ್ ಒಂದೇ ಪಂದ್ಯದ ಮೂಲಕ 13 ವರ್ಷದೊಳಗಿನವರ ಕರ್ನಾಟಕ ತಂಡಕ್ಕೆ ಕಾಲಿಟ್ಟಿದ್ದರು. ರಾಹುಲ್ ಮತ್ತು ಕರುಣ್ ಈ ಹಿಂದೆಯೇ ಟೆಸ್ಟ್ ಆಡಿದ್ದರೂ, ಮಯಾಂಕ್ ಅವರಿಗೆ ಆ ಅವಕಾಶ ಒದಗಿ ಬಂದಿರಲಿಲ್ಲ. ಆದರೆ ದೇಶೀಯ ಕ್ರಿಕೆಟ್ ಹಾಗೂ ಭಾರತ ‘ಎ’ ತಂಡದ ಪರ ತೋರಿದ ಶ್ರೇಷ್ಠ ಪ್ರದರ್ಶನಕ್ಕೆ ಇದೀಗ ಫಲ ಸಿಕ್ಕಿದೆ.
ಉತ್ತಮ ಸ್ನೇಹಿತರಾದ ರಾಹುಲ್ ಮತ್ತು ಮಯಾಂಕ್ 2010ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ್ದರು.

LEAVE A REPLY

Please enter your comment!
Please enter your name here

5 × 4 =