ಮಹಿಳಾ ಕೆಪಿಎಲ್: ಪ್ರದರ್ಶನ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ಗೆ ಜಯ

0

ಮೈಸೂರು, ಸೆಪ್ಟೆಂಬರ್ 4: ಮಹಿಳಾ ಕೆಪಿಎಲ್ ಆರಂಭಿಸುವ ಹೆಜ್ಜೆಯೆಂಬಂತೆ ಮಂಗಳವಾರ ನಡೆದ ಮಹಿಳಾ ಟಿ20 ಪ್ರದರ್ಶನ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಲಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಇಲ್ಲಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 93 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಜಯ ಗಳಿಸಿತು. ಕೊನೆಯ ಓವರ್‌ನಲ್ಲಿ ಗೆಲ್ಲಲು 7 ರನ್ ಗಳಿಸಬೇಕಿದ್ದಾಗ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಆಕಾಂಕ್ಷಾ ಕೊಹ್ಲಿ ಮೈಸೂರು ವಾರಿಯರ್ಸ್‌ಗೆ ಜಯ ತಂದು ಕೊಟ್ಟರು.
ಬುಧವಾರ ನಡೆಯಲಿರುವ 2ನೇ ಪ್ರದರ್ಶನ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಲಿವೆ.

Akanksha Kohli

Brief scores

Shivamogga Lions: 93/6 in 20 overs (Prathyusha C 24) lost to

Mysuru Warriors: 94/6 in 19.2 overs (Akanksha Kohli 34 n.o., Aditi Rajesh 24 n.o; Rameshwari Gayakwad 2-10) by 4 wickets.

LEAVE A REPLY

Please enter your comment!
Please enter your name here

13 + 11 =