ಮಹಿಳಾ ಕೆಪಿಎಲ್ ಪ್ರದರ್ಶನ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಕಣಕ್ಕೆ

0
PC: Veda Krishnamurthy/Twitter
ಬೆಂಗಳೂರು, ಸೆಪ್ಟೆಂಬರ್ 1: ಮಹಿಳಾ ಕೆಪಿಎಲ್ ಆರಂಭಿಸುವ ಮೊದಲ ಹೆಜ್ಜೆಯೆಂಬಂತೆ ಕರ್ನಾಟಕ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಪ್ರದರ್ಶನ ಪಂದ್ಯವನ್ನು ಕೆಎಸ್‌ಸಿಎ ಆಯೋಜಿಸಿತ್ತು. ಈ ವರ್ಷ ಕೆಎಸ್‌ಸಿಎ ಎರಡು ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಿದ್ದು, ಈ ಪಂದ್ಯಗಳು ಸೆಪ್ಟೆಂಬರ್ 4 ಮತ್ತು 5ರಂದು ನಡೆಯಲಿವೆ.
ಸೆಪ್ಟೆಂಬರ್ 4ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗ ಲಯನ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳ ನಡುವೆ ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಪ್ರದರ್ಶನ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 5ರಂದು ಬಿಜಾಪುರ ಬುಲ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.
ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್, ವನಿತಾ ವಿ.ಆರ್ ಸಹಿತ ಕರ್ನಾಟಕದ ಹಲವಾರು ಆಟಗಾರ್ತಿಯರು ಈ ಪ್ರದರ್ಶನ ಪಂದ್ಯಗಳಲ್ಲಿ ಆಡಲಿದ್ದಾರೆ.
ಕಳೆದ ವರ್ಷ ಎರಡು ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆದಿತ್ತು. ಈ ಬಾರಿ ತಂಡಗಳ ಸಂಖ್ಯೆನ್ನು 4ಕ್ಕೆ ಹೆಚ್ಚಿಸಲಾಗಿದೆ.
ಪ್ರದರ್ಶನ ಪಂದ್ಯಗಳಲ್ಲಿ ಆಡಲಿರುವ ಆಟಗಾರ್ತಿಯರು
ವೇದಾ ಕೃಷ್ಣಮೂರ್ತಿ, ವನಿತಾ ವಿ.ಆರ್., ಕರುಣಾ ಜೈನ್, ರಕ್ಷಿತ್ ಕೃಷ್ಣಪ್ಪ, ದಿವ್ಯಾ ಜ್ಞಾನಾನಂದ್, ಸಂಜನಾ ಬಾಟ್ನಿ, ರಾಜೇಶ್ವರಿ ಗಾಯಕ್ವಾಡ್, ರಾಮೇಶ್ವರಿ ಗಾಯಕ್ವಾಡ್, ಪ್ರತ್ಯೂಷಾ ಚಲ್ಲೂರು, ಶುಭಾ ಸತೀಶ್, ಮೊನಿಕಾ ಪಟೇಲ್, ಅದಿತಿ ರಾಜೇಶ್, ಶಿಶಿರಾ ಗೌಡ, ಆಕಾಂಕ್ಷಾ ಕೊಹ್ಲಿ, ಪ್ರತ್ಯೂಷಾ ಕುಮಾರ್, ಸಹನಾ ಪವಾರ್, ಪುಷ್ಪಾ ಕಿರೆಸೂರ್, ಸೌಮ್ಯ ಗೌಡ, ವೃಂದಾ ದಿನೇಶ್, ಚಂದು ವಿ., ಶ್ರೇಯಾಂಕಾ ಪಾಟೀಲ್, ಆದಿಶ್ರೀ ಚೆಂಗಪ್ಪ, ಅನಘಾ ಮುರಳಿ, ಲಿಕಿತಾ, ನಿಕ್ಕಿ ಪ್ರಸಾದ್, ಪ್ರೀತಿ ಬಿ., ಚಾಂದಸಿ ಕೃಷ್ಣಮೂರ್ತಿ, ಚಾಹೆಲ್ ಚೋಪ್ರಾ, ಶುಭಾಶ್ರೀ ಕೃಷ್ಣ, ಸಿಮ್ರನ್ ಹೆನ್ರಿ, ಶ್ರದ್ಧಾ, ನೇತ್ರಾವವತಿ ಗೌಡ, ರೋಶನಿ ಕಿರಣ್‌ಕುಮಾರ್, ಕೃಷಿಕಾ ರೆಡ್ಡಿ, ಸ್ನೇಹಾ ಜಗದೀಶ್, ರಕ್ಷಿತಾ ನಾಯಕ, ಹೇಮಾಂಜಲಿ ಜಗದಾಳೆ, ಐಶ್ವರ್ಯ ಗಣೇಶ್.
ವೇಳಾಪಟ್ಟಿ
ಸೆಪ್ಟೆಂಬರ್ 4: ಶಿವಮೊಗ್ಗ ಲಯನ್ಸ್- ಮೈಸೂರು ವಾರಿಯರ್ಸ್
ಪಂದ್ಯ ಆರಂಭ: ಬೆಳಗ್ಗೆ 10.30ಕ್ಕೆ
ಸ್ಥಳ: ಎಸ್‌ಡಿಎನ್‌ಆರ್ ಕ್ರೀಡಾಂಗಣ, ಮೈಸೂರು
ಸೆಪ್ಟೆಂಬರ್ 5: ಬಿಜಾಪುರ ಬುಲ್ಸ್- ಬೆಳಗಾವಿ ಪ್ಯಾಂಥರ್ಸ್
ಪಂದ್ಯ ಆರಂಭ: ಬೆಳಗ್ಗೆ 10.30ಕ್ಕೆ
ಸ್ಥಳ: ಎಸ್‌ಡಿಎನ್‌ಆರ್ ಕ್ರೀಡಾಂಗಣ, ಮೈಸೂರು

LEAVE A REPLY

Please enter your comment!
Please enter your name here

two + 3 =