ಮಹಿಳಾ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತದ ವನಿತೆಯರು

0
PC: BCCI Women/Twitter

ಗಾಲ್, ಸೆಪ್ಟೆಂಬರ್ 13: ಎರಡನೇ ಏಕದಿನ ಪಂದ್ಯದಲ್ಲಿ 7 ರನ್‌ಗಳ ಗೆಲುವು ಸಾಸುವ ಮೂಲಕ ಭಾರತದ ಮಹಿಳಾ ಕ್ರಿಕೆಟ್ ತಂಡ, ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ.
ಗಾಲ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯವನ್ನು ಗೆದ್ದ ಮಿಥಾಲಿ ರಾಜ್ ಬಳಗ, ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಸರಣಿ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟಾಯಿತು. ತಂಡದ ಪರ ನಾಯಕಿ ಮಿಥಾಲಿ ರಾಜ್(52 ರನ್, 121 ಎಸೆತ) ಮತ್ತು ವಿಕೆಟ್ ಕೀಪರ್ ತಾನಿಯಾ ಭಾಟಿಯಾ(68 ರನ್, 66 ಎಸೆತ) ಅರ್ಧಶತಕ ದಾಖಲಿಸಿದರು. ಮೊದಲ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪಂಜಾಬ್‌ನ 20 ವರ್ಷದ ಆಟಗಾರ್ತಿ ತಾನಿಯಾ ಭಾಟಿಯಾಗೆ ಆ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. 2ನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ತಾನಿಯಾ, 9 ಬೌಂಡರಿಗಳೊಂದಿಗೆ ಆಕರ್ಷಕ ಇನ್ನಿಂಗ್ಸ್ ಕಟ್ಟಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮತ್ತೊಬ್ಬ ಆಟಗಾರ್ತಿ ತಮಿಳುನಾಡಿನ ಡಿ.ಹೇಮಲತಾ 31 ಎಸೆತಗಳಲ್ಲಿ 35 ರನ್ ಗಳಿಸಿದರು.
220 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 48.1 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟಾಯಿತು. ಸರಣಿಯ 3ನೇ ಪಂದ್ಯ ಸೆಪ್ಟೆಂಬರ್ 16ರಂದು ನಡೆಯಲಿದೆ.

Brief scores
India Women: 219 all out in 50 overs (Mithali Raj 52, Taniya Bhatia 68, D.Hemalatha 35; KDU Prabodhani 2/45, SS Weerakkody 2/36, Chamari Atapattu 3/42).
Sri Lanka Women: 212 all out in 48.1 overs (Chamari Atapattu 57, HASD Siriwardene 49; Mansi Joshi 2/51, Rajeshwari Gayakwad 2/37, Shikha Pandey 1/21, Deepti Sharma 1/19).

LEAVE A REPLY

Please enter your comment!
Please enter your name here

thirteen + 13 =