ಮಹಿಳಾ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಜಯ

0
PC: Twitter

ಗಾಲ್, ಸೆಪ್ಟೆಂಬರ್ 11: ಮಾನಸಿ ಜೋಶಿ(3/16) ಅವರ ಮಾರಕ ಬೌಲಿಂಗ್ ಹಾಗೂ ಸ್ಮತಿ ಮಂಧಾನ(73*) ಅವರ ಬ್ಯಾಟಿಂಗ್ ವೈಭವದ ನೆರವಿನಿಂದ ಭಾರತ ಮಹಿಳಾ ತಂಡ, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಗಾಲ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ವನಿತೆಯರು 35.1 ಓವರ್‌ಗಳಲ್ಲಿ ಕೇವಲ 98 ರನ್‌ಗಳಿಗೆ ಆಲೌಟಾದರು. ಭಾರತ ಪರ ಮಧ್ಯಮ ವೇಗಿ ಮಾನಸಿ ಜೋಶಿ 16 ರನ್ನಿತ್ತು 3 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ(2/13) ಮತ್ತು ಪೂನಂ ಯಾದವ್(2/13) ತಲಾ ಎರಡು ವಿಕೆಟ್ ಉರುಳಿಸಿದರು.
ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ 76 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನೊಳಗೊಂಡ ಅಜೇಯ 73 ರನ್ ಸಿಡಿಸಿದರು.

ಭಾರತ ತಂಡದ ದಯಾಳನ್ ಹೇಮಲತಾ ಮತ್ತು ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

Brief scores
Sri Lanka Women: 98 all out in 35.1 overs (Chamari Atapattu 33, Sripali Weerakkody 26; Mansi Joshi 3/16, Julan Goswami 2/13, Poonam Yadav 2/13).

LEAVE A REPLY

Please enter your comment!
Please enter your name here

eight − one =