ಮಹಿಳಾ ಕ್ರಿಕೆಟ್: 300ನೇ ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಜೂಲನ್ ಗೋಸ್ವಾಮಿ

0
PC: BCCI/Twitter

ಗಾಲ್, ಸೆಪ್ಟೆಂಬರ್ 11: ಭಾರತದ ಅನುಭವಿ ಮಧ್ಯಮ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟ್ ತಾರೆ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಆತಿಥೇಯ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 35 ವರ್ಷದ ಜೂಲನ್ ಗೋಸ್ವಾಮಿ ಈ ದಾಖಲೆ ನಿರ್ಮಿಸಿದರು. ಟೆಸ್ಟ್(10), ಏಕದಿನ(170) ಹಾಗೂ ಟಿ20(68) ಸೇರಿ ಭಾರತ ಪರ ಒಟ್ಟು 248 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಜೂಲನ್ 301 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಇದೇ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಕೂಡ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. 35 ವರ್ಷದ ಮಿಥಾಲಿ ರಾಜ್ ಇದುವರೆಗೆ 118 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.

ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ಸ್
301     ಜೂಲನ್ ಗೋಸ್ವಾಮಿ (ಭಾರತ)
252     ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್)
244     ಎಲೈಸ್ ಪೆರಿ (ಆಸ್ಟ್ರೇಲಿಯಾ)
240     ಕ್ಯಾಥ್ರಿನ್ ಫಿಟ್ಜ್‌ಪ್ಯಾಟ್ರಿಕ್ (ಆಸ್ಟ್ರೇಲಿಯಾ)
239     ಜೆನ್ನಿ ಗನ್ (ಇಂಗ್ಲೆಂಡ್)
236     ಕ್ಯಾಥರಿನ್ ಬ್ರಂಟ್ (ಇಂಗ್ಲೆಂಡ್)
229     ಲಿಸಾ ಸ್ಟಾಲೇಕರ್ (ಆಸ್ಟೇಲಿಯಾ)
200     ಸನಾ ಮಿರ್ (ಪಾಕಿಸ್ತಾನ)

LEAVE A REPLY

Please enter your comment!
Please enter your name here

seven − 1 =