ಮಹಿಳಾ ಟಿ೨೦ ವಿಶ್ವಕಪ್: ಸೆಮಿಫೈನಲ್‌ನಲ್ಲಿ ಭಾರತದ ವನಿತೆಯರಿಗೆ ನಿರಾಸೆ

0

ಆಂಟಿಗಾ, ನವೆಂಬರ್ ೨೩: ಟಿ೨೦ ವಿಶ್ವಕಪ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಭಾರತದ ಮಹಿಳಾ ತಂಡಕ್ಕೆ ಸೆಮಿಫೈನಲ್‌ನಲ್ಲಿ ಆಘಾತ ಎದುರಾಗಿದೆ. ಶುಕ್ರವಾರ ನಾರ್ತ್ ಸೌಂಡ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ಟಿ೨೦ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ, ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ೮ ವಿಕೆಟ್ ಗಳ ಸೋಲುಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ೧೯.೩ ಓವರ್‌ಗಳಲ್ಲಿ ಕೇವಲ ೧೧೨ ರನ್‌ಗಳಿಗೆ ಆಲೌಟಾಯಿತು. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ನಿರ್ಣಾಯಕ ಪಂದ್ಯದಲ್ಲಿ ಆಡಿಸದೆ ಇದ್ದ ನಿರ್ಧಾರ ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಭಾರತ ಪರ ಉಪನಾಯಕಿ ಸ್ಮೃತಿ ಮಂಧನ ೨೩ ಎಸೆತಗಳಲ್ಲಿ ೫ ಬೌಂಡರಿ ಮತ್ತು ೧ ಸಿಕ್ಸರ್ ನೆರವಿನಿಂದ ೩೪ ರನ್ ಗಳಿಸಿದ್ದು ಬಿಟ್ಟರೆ ಬೇರಾರೂ ೩೦ರ ಗಟಿ ಮುಟ್ಟಲಿಲ್ಲ. ಜೆಮೈಮಾ ರಾಡ್ರಿಗ್ಸ್ (೨೬) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (೧೬) ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದು ಭಾರತಕ್ಕೆ ಹೊಡೆತ ನೀಡಿತು.
ನಂತರ ಸುಲಭ ಗುರಿ ಚೇಸ್ ಮಾಡಿದ ಇಂಗ್ಲೆಂಡ್ ೧೭.೧ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೧೬ ರನ್ ಗಳಿಸಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿತು. ಲೀಗ್ ಹಂತದಲ್ಲಿ ನ್ಯೂಜಿಲೆಂಡ್, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ನಿರಾಸೆ ಅನುಭವಿಸಿತು.
Brief score
India Women: 112 all out in 19.3 overs (Smriti Mandhana 34, Jemima Rodrigues 26, Harmanpreet Kaur 16; Heather Knight 3/9, KL Gordon 2/20, S Ecclestone 2/22) lost to England: 116/2 in 17.1 overs (Amy Jones 53 not out, Natalie Sciver 52 not out; Deepti Sharma 1/24, Radha Yadav 1/20) by 8 wickets.

LEAVE A REPLY

Please enter your comment!
Please enter your name here

fifteen + 17 =