ಮಹಿಳಾ ಟಿ20 ಚಾಲೆಂಜ್: ಇಬ್ಬರು ಕನ್ನಡತಿಯರಿಗೆ ಸ್ಥಾನ

0

ಬೆಂಗಳೂರು, ಏಪ್ರಿಲ್ 25: ಮಹಿಳಾ ಐಪಿಎಲ್ ಎಂದೇ ಕರೆಯಲ್ಪಡುವ ಮಹಿಳಾ ಟಿ20 ಚಾಲೆಂಜ್ ಟೂರ್ನಿಗೆ ತಂಡಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಇಬ್ಬರು ಆಟಗಾರ್ತಿಯರು ಅವಕಾಶ ಪಡೆದಿದ್ದಾರೆ.

ಸೂಪರ್ ನೋವಾಸ್ ತಮಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದರೆ, ಟ್ರಯಲ್ ಬ್ಲೇಜರ್ಸ್ ತಂಡವನ್ನು ಸ್ಮೃತಿ ಮಂಧಾನ ಮತ್ತು ವೆಲೋಸಿಟಿ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ. ಕರ್ನಾಟಕದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ವೆಲೋಸಿಟಿ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಟ್ರಯಲ್ ಬ್ಲೇಜರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿ ತಂಡದಲ್ಲಿ ತಲಾ ನಾಲ್ವರು ವಿದೇಶಿ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಟೂರ್ನಿ ಮೇ 6ರಿಂದ 11ರವರೆಗೆ ಜೈಪುರದಲ್ಲಿ ನಡೆಯಲಿದೆ.

ತಂಡಗಳ ವಿವರ:

LEAVE A REPLY

Please enter your comment!
Please enter your name here

15 + eleven =