ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಭಾರತ ತಂಡ

0
Mithali Raj, PC: BCCI

ಗಯಾನ, ನವೆಂಬರ್ 15: ಐರ್ಲೆಂಡ್ ತಂಡವನ್ನು 52 ರನ್ಗಳಿಂದ ಸುಲಭವಾಗಿ ಮಣಿಸಿ ಭಾರತ ತಂಡ, ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.

ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಸರ್ವಾಂಗೀಣ ಪ್ರದರ್ಶನವಿತ್ತು ಸುಲಭ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಕಲೆ ಹಾಕಿತು. ಮಾಜಿ ನಾಯಕಿ ಮಿಥಾಲಿ ರಾಜ್ (51) ತಾಳ್ಮೆಯ ಅರ್ಧಶತಕ ದಾಖಲಿಸಿದರೆ, ಸ್ಮೃತಿ ಮಂಧನ 33 ರನ್ ಗಳಿಸಿದರು. ಯುವ ಆಟಗಾರ್ತಿ ಜೆಮೈಮಾ ರಾಡ್ರಿಗ್ಸ್ 18 ರನ್ ಗಳಿಸಿದರು.

ನಂತರ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಭಾರತೀಯ ವನಿತೆಯರ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಭಾರತ ಪರ ರಾಧಾ ಯಾದವ್ (3/25) 3 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ (2/15) 2 ವಿಕೆಟ್, ಪೂನಂ ಯಾದವ್ (1/14) ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ (1/10) ತಲಾ ಒಂದು ವಿಕೆಟ್ ಉರುಳಿಸಿದರು.

ಶನಿವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Brief scores: India: 145/6 in 20 overs (Mithali Raj 51, Smriti Mandhana 33, Jemima Rodrigues 18; KJ Garth 2/22) beat Ireland: 93/8 in 20 overs (CMA Shillington 23, IMHC Joyce 33; Radha Yadav 3/25, Deepti Sharma 2/15, Poonam Yadav 1/14, Harmanpreet Kaur 1/10) by 52 runs.

LEAVE A REPLY

Please enter your comment!
Please enter your name here

3 × 1 =