ಮಹಿಳಾ ಬಿಬಿಎಲ್: ವೇಗದ ಅರ್ಧಶತಕ ಬಾರಿಸಿದ ಕೌರ್, ಸ್ಮೃತಿ ಮಂಧನ

0
PC: WBBL

ಸಿಡ್ನಿ, ಡಿಸೆಂಬರ್ 9: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧನ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ ವೇಗದ ಅರ್ಧಶತಕಗಳನ್ನು ಬಾರಿಸಿದ್ದಾರೆ.

ಸಿಡ್ನಿ ಥಂಡರ್ ಪರ ಆಡುತ್ತಿರುವ ಹರ್ಮನ್ ಪ್ರೀತ್ ಕೌರ್ ಬ್ರಿಸ್ಬೇನ್ ಹೀಟ್ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಒಟ್ಟಾರೆ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಸ್ ನೆರವಿನಿಂದ 56 ರನ್ ಗಳಿಸಿದ ಹರ್ಮನ್ ಪ್ರೀತ್, ಸಿಡ್ನಿ ಥಂಡರ್ ಗೆಲುವಿಗೆ ಕಾರಣರಾದರು.

ಹೊಬಾರ್ಟ್ ಹರಿಕೇನ್ಸ್ ಪರ ಆಡುತ್ತಿರುವ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ತಮ್ಮ ಸ್ಫೋಟಕ ಇನ್ನಿಂಗ್ಸ್ ನಲ್ಲಿ 41 ಎಸೆತಗಳನ್ನು ಎದುರಿಸಿದ ಮಂಧನ 13 ಬೌಂಡರಿಗಳ ನೆರವಿನಿಂದ ಸ್ಫೋಟಕ 69 ರನ್ ಸಿಡಿಸಿ ಹೊಬಾರ್ಟ್ ತಂಡದ ಗೆಲುವಿಗೆ ಕಾರಣರಾದರು.

LEAVE A REPLY

Please enter your comment!
Please enter your name here

17 + five =