ಮೈಸೂರಿನಲ್ಲಿ ನಾಳೆಯಿಂದ ರಣಜಿ ಪಂದ್ಯ: ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ

0
Abhishek Reddy (left) and Devdutt Padikkal. PC: Facebook

ಮೈಸೂರು, ನವೆಂಬರ್ 27: ಆರಂಭದ ಎರಡು ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿರುವ 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.
ಎಲೈಟ್ ‘ಎ’ ಗುಂಪಿನ ಈ ಪಂದ್ಯ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಾಳೆ ಆರಂಭವಾಗಲಿದೆ. ಈಗಾಗಲೇ ಕರ್ನಾಟಕ ತಂಡ ಮೈಸೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದು, ಮಹಾರಾಷ್ಟ್ರ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ. ಆಡಿರುವ 2 ಪಂದ್ಯಗಳಿಂದ 6 ಅಂಕ ಗಳಿಸಿರುವ ಕರ್ನಾಟಕ ಎಲೈಟ್ ‘ಎ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಸೌರಾಷ್ಟ್ರ (12 ಅಂಕ) ಮತ್ತು ಗುಜರಾತ್ (10 ಅಂಕ) ಮೊದಲೆರಡು ಸ್ಥಾನಗಳಲ್ಲಿವೆ.
ಈ ಪಂದ್ಯಕ್ಕಾಗಿ ಕರ್ನಾಟಕ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಅನುಭವಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ಶಿಶಿರ್ ಭವಾನೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರಿಬ್ಬರ ಬದಲು ಯುವ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಅಭಿಷೇಕ್ ರೆಡ್ಡಿ ಮ್ತತು ದೇವದತ್ ಪಡಿಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೆನ್ನು ನೋವಿನ ಕಾರಣ ಮುಂಬೈ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಆರ್.ವಿನಯ್ ಕುಮಾರ್ ಈ ಪಂದ್ಯಕ್ಕೆ ಲಭ್ಯರಿದ್ದಾರೆ.
ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಉತ್ತಮ ದಾಖಲೆ ಹೊಂದಿದ್ದು, ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು ಕಂಡಿದ್ದು 3 ಬಾರಿ ಸೋಲು ಕಂಡಿದೆ. 3 ಪಂದ್ಯಗಳು ಡ್ರಾಗೊಂಡಿವೆ. ಮಹಾರಾಷ್ಟ್ರ ವಿರುದ್ಧ ಆಡಿದ ಕಳೆದ 9 ಪಂದ್ಯಗಳಲ್ಲಿ ಕರ್ನಾಟಕ 8 ಗೆಲುವು ದಾಖಲಿಸಿದ್ದು, ಕೇವಲ ಒಮ್ಮೆ ಮಾತ್ರ ಸೋಲುಂಡಿದೆ.

ಮಹಾರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ
ಆರ್.ವಿನಯ್ ಕುಮಾರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಡಿ.ನಿಶ್ಚಲ್, ಅಭಿಷೇಕ್ ರೆಡ್ಡಿ, ಸಿದ್ಧಾರ್ಥ್ ಕೆ.ವಿ., ಮಿರ್ ಕೌನೇನ್ ಅಬ್ಬಾಸ್, ಪವನ್ ದೇಶಪಾಂಡೆ, ಬಿ.ಆರ್ ಶರತ್ (ವಿಕೆಟ್ ಕೀಪರ್), ಜೆ.ಸುಚಿತ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಎಂ.ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕಲ್, ಲಿಯಾನ್ ಖಾನ್, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್.

ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಸಾಧನೆ
ಒಟ್ಟು ಪಂದ್ಯ 431
ಗೆಲುವು 194
ಸೋಲು 63
ಡ್ರಾ 174

ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ಸಾಧನೆ
ಒಟ್ಟು ಪಂದ್ಯ 380
ಗೆಲುವು 92
ಸೋಲು 67
ಡ್ರಾ 221

ಮಹಾರಾಷ್ಟ್ರ ವಿರುದ್ಧ ಕರ್ನಾಟಕದ ಸಾಧನೆ
ಒಟ್ಟು ಪಂದ್ಯ 14
ಗೆಲುವು 08
ಸೋಲು 03
ಡ್ರಾ 03

Karnataka in last 9 matches against Maharashtra
Season Venue Result for Karnataka
1 2005/06 Bangalore Won by Ings & 8 runs
2 2007/08 Ratnagiri Won by Ings & 129 runs
3 2008/09 Bangalore Won by 155 runs
4 2009/10 Poona Won by Ings & 128 runs
5 2012/13 Pune Won by 8 wkts
6 2013/14 Hyderabad Won by 7 wkts
7 2015/16 Pune LOST by 53 runs
8 2016/17 Mohali Won by 10 wkts
9 2017/18 Pune Won by Ings & 136 runs

Stats: Channagiri Keshavamurthy

LEAVE A REPLY

Please enter your comment!
Please enter your name here

5 × 4 =