ಯೂತ್ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಪಂದ್ಯದಲ್ಲಿ ಬಾಂಗ್ಲಾ ಸವಾಲು

0
File Photo: India skipper and midfielder Vivek Sagar Prasad

ಹೊಸದಿಲ್ಲಿ, ಸೆಪ್ಟೆಂಬರ್ 8: ಭಾರತದ 18 ವರ್ಷದೊಳಗಿನವರ ಪುರುಷರ ಹಾಕಿ ತಂಡ, ಬ್ಯುನೋಸ್ ಏರೆಸ್ 2018 ಯೂತ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಅಕ್ಟೋಬರ್ 7ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಇದೇ ವೇಳೆ ಭಾರತದ 18 ವರ್ಷದೊಳಗಿನವರ ಮಹಿಳಾ ಹಾಕಿ ತಂಡ, ಅದೇ ದಿನ ಆಸ್ಟ್ರಿಯಾ ವಿರುದ್ಧ ಸೆಣಸಲಿದೆ.
ವಿವೇಕ್ ಸಾಗರ್ ಪ್ರಸಾದ್ ನೇತೃತ್ವದ ಭಾರತ ತಂಡ ಪೂಲ್ ‘ಬಿ’ನಲ್ಲಿದ್ದು, ಅಕ್ಟೋಬರ್ 8ರಂದು ಆಸ್ಟ್ರಿಯಾ ವಿರುದ್ಧ ಪಂದ್ಯವಾಡಲಿದೆ. 9ರಂದು ಕೀನ್ಯಾ ವಿರುದ್ಧ, 10ರಂದು ಆಸ್ಟ್ರೇಲಿಯಾ ವಿರುದ್ಧ ಹಾಗೂ 11ರಂದು ಕೆನಡಾ ವಿರುದ್ಧ ಭಾರತ ಪಂದ್ಯಗಳನ್ನಾಡಲಿದೆ.
ಅರ್ಜೆಂಟೀನಾ, ಮಲೇಷ್ಯಾ, ಮೆಕ್ಸಿಕೊ, ಪೋಲೆಂಡ್, ವನುವಾಟು ಮತ್ತು ಜಾಂಬಿಯಾ ತಂಡಗಳು ಪೂಲ್ ‘ಎ’ ನಲ್ಲಿವೆ.
ಮಹಿಳಾ ವಿಭಾಗದಲ್ಲಿ ಸಲಿಮಾ ಟೆಟೆ ಮುಂದಾಳತ್ವದ ಭಾರತ ತಂಡ ಪೂಲ್ ‘ಎ’ನಲ್ಲಿದ್ದು, ಅಕ್ಟೋಬರ್ 8ರದು ಉರುಗ್ವೆ, 9ರಂದು ವನುವಾಟು, 10ರಂದು ಅರ್ಜೆಂಟೀನಾ, 11ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳನ್ನಾಡಲಿದೆ. ಆಸ್ಟ್ರೇಲಿಯಾ, ಚೀನಾ, ಮೆಕ್ಸಿಕೊ, ನಮೀಬಿಯಾ, ಪೋಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಪೂಲ್ ‘ಬಿ’ನಲ್ಲಿವೆ.

LEAVE A REPLY

Please enter your comment!
Please enter your name here

nineteen − one =