ರಣಜಿ ಟ್ರೋಫಿ: ಕರ್ನಾಟಕಕ್ಕೆ ಸಿದ್ದಾರ್ಥ್ ಚೊಚ್ಚಲ ಶತಕದ ಆಸರೆ

0
Karnataka's KV Siddharth celebrates after scoring his maiden century against Mumbai in Belagavi on Tuesday.

ಬೆಳಗಾವಿ, ನವೆಂಬರ್ 20: ಯುವ ಬ್ಯಾಟ್ಸ್ ಮನ್ ಕೆ.ವಿ ಸಿದ್ದಾರ್ಥ್ (ಔಟಾಗದೆ 104 ರನ್) ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಕರ್ನಾಟಕ ತಂಡ, ಮುಂಬೈ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ.

ಇಲ್ಲಿನ ಕೆಎಸ್ ಸಿಎ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್.ವಿನಯ್ ಕುಮಾರ್ ಬೆನ್ನು ನೋವಿನಿಂದ ಬಳಲುತ್ತಿದ್ದ ಕಾರಣ ಆಲ್ರೌಂಡರ್ ಶ್ರೇಯಸ್ ಗೋಪಾಲ್ ತಂಡದ ನಾಯಕತ್ವ ವಹಿಸಿದರು. ಇನ್ನಿಂಗ್ಸ್ ಆರಂಭಿಸಿದ ಕಳೆದ ಪಂದ್ಯದ ಶತಕವೀರ ಡಿ.ನಿಶ್ಚಲ್ (27) ಮತ್ತು ಶಿಶಿರ್ ಭವಾನೆ (5) 59 ರನ್ ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.

ಈ ಸಂದರ್ಭದಲ್ಲಿ ಜೊತೆಗೂಡಿದ ಮಿರ್ ಕೌನೇನ್ ಅಬ್ಬಾಸ್ (64) ಮತ್ತು ಕೆ.ವಿ ಸಿದ್ದಾರ್ಥ್ (104 ನಾಟೌಟ್) 3ನೇ ವಿಕೆಟ್ ಗೆ ಅತ್ಯಮೂಲ್ಯ 104 ರನ್ ಸೇರಿಸಿ ತಂಡದ ಚೇತರಿಕೆಗೆ ಕಾರಣರಾದರು. ಅಬ್ಬಾಸ್ ಅರ್ಧಶತಕ ಗಳಿಸಿ ಔಟಾದರೆ, ವಿದರ್ಭ ವಿರುದ್ಧದ ಕಳೆದ ಪಂದ್ಯದಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸಿದ್ದಾರ್ಥ್ ಆಡಿದ 2ನೇ ಪಂದ್ಯದಲ್ಲೇ ಶತಕ ಸಾಧನೆ ಮಾಡಿದರು. ಒತ್ತಡದ ಸನ್ನಿವೇಶದಲ್ಲಿ ದಿಟ್ಟ ಆಟವಾಡಿದ ಸಿದ್ದಾರ್ಥ್ 41 ಬಾರಿ ಚಾಂಪಿಯನ್ಸ್ ಮುಂಬೈ ವಿರುದ್ಧ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. 164 ಎಸೆತಗಳಲ್ಲಿ ಚೊಚ್ಚಲ ರಣಜಿ ಶತಕ ಪೂರ್ತಿಗೊಳಿಸಿದ ಸಿದ್ದಾರ್ಥ್ ದಿನದ ಕೊನೆಯಲ್ಲಿ 184 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ಸ್ ನೆರವಿನಿಂದ 104 ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸಿದ್ದಾರ್ಥ್ ಜೊತೆ ಶ್ರೇಯಸ್ ಗೋಪಾಲ್ (ಔಟಾಗದೆ 47) ಕ್ರೀಸ್ ನಲ್ಲಿದ್ದಾರೆ. ಈ ಜೋಡಿ ಮುರಿಯದ 5ನೇ ವಿಕೆಟ್ ಗೆ ಈಗಾಗಲೇ 88 ರನ್ ಗಳ ಜೊತೆಯಾಟವಾಡಿದೆ.

Brief scores (I innings): Karnataka: 263/4 in 88 overs (KV Siddharth 104 batting (184b, 10×4, 2×6, Shreyas Gopal 47 batting (87b, 8×4), D. Nischal 27, Kaunian Abbas 64, Shivam Dubey) vs Mumbai.

LEAVE A REPLY

Please enter your comment!
Please enter your name here

ten − 5 =