ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕದ ವೇಗ, ಸ್ಪಿನ್ ದಾಳಿಗೆ ರಾಜಸ್ಥಾನ ತತ್ತರ

0

ಬೆಂಗಳೂರು, ಜನವರಿ 15: ಕರ್ನಾಟಕದ ವೇಗ ಹಾಗೂ ಸ್ಪಿನ್ ದಾಳಿಗೆ ತತ್ತರಿಸಿದ ರಾಜಸ್ಥಾನ ತಂಡ, ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇವಲ 224 ರನ್ ಗಳಿಗೆ ಆಲೌಟಾಗಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಕರ ಸಂಕ್ರಾಂತಿಯಂದು ಆರಂಭಗೊಂಡ ಐದು ದಿನಗಳ ಪಂದ್ಯದ ಮೊದಲ ದಿನವಾದ ಮಂಗಳವಾರ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡರು. ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನಕ್ಕೆ ಕರ್ನಾಟಕದ ಮಾಜಿ ನಾಯಕ ಆರ್.ವಿನಯ್ ಕುಮಾರ್ ಮೊದಲ ಆಘಾತ ನೀಡಿದರು. ವಿನಯ್ ಅವರ ಆಕರ್ಷಕ ಇನ್ ಸ್ವಿಂಗ್ ಎಸೆತಕ್ಕೆ ಎವಿ ಗೌತಮ್ ಕ್ಲೀನ್ ಬೌಲ್ಡಾಗಿ ಹೊರ ನಡೆದರು.

ಇನ್ನಿಂಗ್ಸ್ ಮಧ್ಯದಲ್ಲಿ ದಾಳಿಗಿಳಿದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಮ್ಮ ಮೊದಲ ಎಸೆತದಲ್ಲೇ ಚೇತನ್ ಬಿಷ್ಟ್(39) ಅವರನ್ನು ಗೂಗ್ಲಿ ಮೂಲಕ ಕ್ಲೀನ್ ಬೌಲ್ಡ್ ಮಾಡಿ ತಂಡಕ್ಕೆ ಮೇಲುಗೈ ತಂದುಕೊಟ್ಟರು.

 ಮಧ್ಯಮ ಕ್ರಮಾಂಕದಲ್ಲಿ ನಾಯಕ ಮಹಿಪಾಲ್ ಲೊಮ್ರೊರ್(50) ಮತ್ತು ರಾಜೇಶ್ ಬಿಷ್ಣೋಯ್(79) ಕರ್ನಾಟಕಕ್ಕೆ ತಿರುಗೇಟು ನೀಡಿದರಾದರೂ, ಆಫ್ ಸ್ಪಿನ್ನರ್ ಕೆ.ಗೌತಮ್(3/54) ಮತ್ತು ವೇಗಿ ಅಭಿಮನ್ಯು ಮಿಥುನ್(3/48) ದಾಳಿಗೆ ತತ್ತರಿಸಿತು. ರಾಜಸ್ಥಾನದ ಮಧ್ಯಮ ಕ್ರಮಾಂಕದಲ ಮೇಲೆ ಮಾರಕವಾಗಿ ಎರಗಿದ ಮಿಥುನ್ ಹಾಗೂ ಗೌತಮ್ ತಲಾ 3 ವಿಕೆಟ್ ಉರುಳಿಸಿದರು. ವಿನಯ್(2/29) ಮತ್ತು ಉಪನಾಯಕ ಶ್ರೇಯಸ್ ಗೋಪಾಲ್(2/41) ತಲಾ ಎರಡು ವಿಕೆಟ್ ಉರುಳಿಸಿದರು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.

Brief scores (Day 1): Rajasthan (I innings): 224 all out in 77.1 overs (Rajesh Bishnoi 79, Mahipal Lomror 50, Chetan Bisht 39, R. Vinay Kumar 2/29, Abhimanyu Mithun  3/48, K. Gowtham 3/54, Shreyas Gopal 2/41) vs Karnataka (I innings): 12/0 in 5 overs. Karnataka trail by 212 runs.

LEAVE A REPLY

Please enter your comment!
Please enter your name here

eighteen − 7 =