ರಣಜಿ ಕ್ವಾರ್ಟರ್ ಫೈನಲ್: ರಾಜಸ್ಥಾನ ವಿರುದ್ಧ ಕರ್ನಾಟಕವೇ ಫೇವರಿಟ್

0

ಬೆಂಗಳೂರು, ಜನವರಿ 13: ಒಂಬತ್ತನೇ ಬಾರಿ ರಣಜಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿರುವ ಕರ್ನಾಟಕ ತಂಡ, ಮಂಗಳವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ತನ್ನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ.

ಮನೀಶ್ ಪಾಂಡೆ ನಾಯಕತ್ವದ ಆತಿಥೇಯ ಕರ್ನಾಟಕ ತಂಡ ತವರು ನೆಲದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ. ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.

ಎಲೈಟ್ ‘ಎ’ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ ಹಾಗೂ 2 ಸೋಲುಗಳೊಂದಿಗೆ ಕರ್ನಾಟಕ ತಂಡ 27 ಅಂಕಗಳೊಂದಿಗೆ ಲೀಗ್ ನಲ್ಲಿ 3ನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಮತ್ತೊಂದೆಡೆ ರಾಜಸ್ಥಾನ ತಂಡ ಎಲೈಟ್ ‘ಸಿ’ ಗುಂಪಿನಲ್ಲಿ ಆಡಿರುವ 9 ಪಂದ್ಯಗಳಲ್ಲಿ 7 ಗೆಲುವು, 2 ಡ್ರಾ ಸಹಿತ 51 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಅಂತಿಮ 8ರ ಘಟ್ಟಕ್ಕೆ ಅರ್ಹತೆ ಪಡೆದಿದೆ.

Karnataka’s KV Siddharth celebrates after scoring his maiden century against Mumbai in Belagavi on Tuesday.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆ.ವಿ ಸಿದ್ಧಾರ್ಥ್ ಆಡಿರುವ 8 ಪಂದ್ಯಗಳಿಂದ 2 ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಕರ್ನಾಟಕ ಪರ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, ಕ್ವಾರ್ಟರ್ ಫೈನಲ್ ನಲ್ಲೂ ತಮ್ಮ ಉತ್ತಮ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ಡಿ.ನಿಶ್ಚಲ್ 8 ಪಂದ್ಯಗಳಿಂದ 3 ಶತಕ, 3 ಅರ್ಧಶತಕಗಳ ನೆರವಿನಿಂದ 613 ರನ್ ಕಲೆ ಹಾಕಿದ್ದಾರೆ. ನಾಯಕ ಮನೀಶ್ ಪಾಂಡೆ, ಕರುಣ್ ನಾಯರ್, ಆರ್.ಸಮರ್ಥ್ ಅವರ ಬ್ಯಾಟಿಂಗ್ ಬಲ ಹೊಂದಿರುವ ಕರ್ನಾಟಕ ಗೆಲ್ಲುವ ಫೇವರಿಟ್ ತಂಡವಾಗಿದೆ.

ಕರ್ನಾಟಕ ಮತ್ತು ರಾಜಸ್ಥಾನ ತಂಡಗಳು ಕೊನೆಯ ಬಾರಿ 2016-17ನೇ ಸಾಲಿನ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಆ ಪಂದ್ಯವನ್ನು ಕರ್ನಾಟಕ 393 ರನ್ ಗಳಿಂದ ಗೆದ್ದುಕೊಂಡಿತ್ತು.

ಆದಕಾರಣಹಿಂದಿನ ವರ್ಷಗಳಲ್ಲಿ ಕರ್ನಾಟಕ ಈ ತಂಡದ ವಿರುದ್ಧ ಆಡಿದಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದರೂ (೯ ಪಂದ್ಯಗಳಲ್ಲಿ ೬ ಜಯ, ೧ ಸೋಲು ಮತ್ತು ೨ ಡ್ರಾ), ರಾಜಸ್ಥಾನ್ ತಂಡವನ್ನು ಹಗುರವಾಗಿ ಕಾಣುವಂತಿಲ್ಲ. ಕರ್ನಾಟಕಕ್ಕೆ ಹೋಲಿಸಿದರೆ ಬ್ಯಾಟಿಂಗ್ ಮತ್ತು ಬೌಲಿಂಗ್ಎರಡು ವಿಭಾಗಳಲ್ಲೂ ರಾಜಸ್ಥಾನ್ ತಂಡ ಈ ವರ್ಷ ಹೆಮ್ಮೆಯಿಂದಬೀಗುತ್ತಿದೆ. ಆ ತಂಡದ ನಾಲ್ಕು ಆಟಗಾರರು ೪೦೦ ರನ್ ಗಡಿ ದಾಟಿದ್ದಾರೆ.ಈ ಸಾಧನೆಯನ್ನು ಕರ್ನಾಟಕದ ಇಬ್ಬರು ಆಟಗಾರರು ಮಾತ್ರ ಮಾಡಿದ್ದಾರೆ.ಆ ತಂಡದ ೩ ಬೌಲರುಗಳು ೩೦ ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರೆಕರ್ನಾಟಕದ ಯಾವ ಬೌಲರ್ ಕೂಡ ಈ ಋತುವಿನಲ್ಲಿ ೩೦ ವಿಕೆಟ್ ಗಡಿತಲುಪಿಲ್ಲ. ಸಮಾಧಾನದ ಸಂಗತಿ ಎಂದರೆ ಮೊಟ್ಟ ಮೊದಲ ಬಾರಿಗೆ೧೯೬೫/೬೬ ರಲ್ಲಿ ಬೆಂಗಳೂರಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ರಾಜಸ್ಥಾನ್ ತಂಡ ಕೇವಲ ಒಂದು ವಿಕೆಟ್ಜಯಗಳಿಸಿದ್ದನ್ನು ಬಿಟ್ಟರೆ, ಆ ತಂಡ ಇದುವರೆಗೆ ೬ ಬಾರಿ ಸೋತು ೨ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಆದರೆ ಇದನ್ನೇ ಹಿನ್ನೆಲೆಯಾಗಿಇಟ್ಟುಕೊಂಡು ಹಾಗೂ ತನ್ನ ತವರು ನೆಲದಲ್ಲೇ ಆಡುತ್ತೇನೆಂಬ ಅತಿ ಆತ್ಮವಿಶ್ವಾಸದಿಂದ ಮೈ ಮರೆತು ಆಡಿದರೆ, ಕರ್ನಾಟಕ ಅಪಾಯಕ್ಕೆ ಸಿಲುಕಿ ಈ ಸಾಲಿನಲ್ಲೂ ರಣಜಿ ಪ್ರಶಸ್ತಿಯಿಂದ ವಂಚಿತವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಪಂದ್ಯಕ್ಕೆ ಕರ್ನಾಟಕದ ಬಹುತೇಕ ಪ್ರಮುಖಆಟಗಾರರು ಲಭ್ಯವಾಗಿದ್ದಾರೆ.

ಕರ್ನಾಟಕ ಈವರೆಗೆ ೪೩೭ ರಣಜಿ ಪಂದ್ಯಗಳನ್ನಾಡಿದೆ (ಗೆಲುವು-೧೯೭, ಸೋಲು-೬೫, ಡ್ರಾ-೧೭೫). ರಾಜಸ್ಥಾನ್ ೩೫೨ ರಣಜಿ ಪಂದ್ಯಗಳಾಡಿದೆ(ಗೆಲುವು-೯೮, ಸೋಲು-೧೦೦, ಡ್ರಾ-೧೫೪). ಆಲೂರು ಮೈದಾನದಲ್ಲಿಆಡಿರುವ ರಣಜಿ ಪಂದ್ಯವೂ ಸೇರಿದಂತೆ ಕರ್ನಾಟಕಕ್ಕೆ ಸಂಬಂಧಿಸಿದಂತೆಬೆಂಗಳೂರಿನಲ್ಲಿ ಈವರೆಗೆ ೧೫೨ ರಣಜಿ ಪಂದ್ಯಗಳು ನಡೆದಿವೆ.(ಗೆಲುವು-೭೪, ಸೋಲು-೨೨, ಡ್ರಾ-೫೬) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಇದುವರೆಗೆ ೯೫ ರಣಜಿ ಪಂದ್ಯಗಳು ಜರುಗಿವೆ.

ಕರ್ನಾಟಕ ರಣಜಿ ಇತಿಹಾಸದಲ್ಲಿ ೨೬ ಬಾರಿ ಕ್ವಾರ್ಟರ್ ಫೈನಲ್ಪಂದ್ಯಗಳನ್ನಾಡಿದೆ (ಗೆಲುವು೧೭, ಸೋಲು-೯), ರಾಜಸ್ಥಾನ್ ೧೫ ಬಾರಿಕ್ವಾರ್ಟರ್ ಫೈನಲ್ ಪ್ರವೇಶಿಸಿದೆ (ಗೆಲುವು-೭, ಸೋಲು-೮). ಕರ್ನಾಟಕತಂಡ ೮ ಬಾರಿ ರಣಜಿ ಪ್ರಶಸ್ತಿ ಪಡೆದಿದೆ, ರಾಜಸ್ಥಾನ್ ಎರಡು ಬಾರಿ ರಣಜಿಪ್ರಶಸ್ತಿ ಗಳಿಸಿದೆ. 

ತಂಡಗಳು ಹೀಗಿವೆ

ಕರ್ನಾಟಕ: ಮನೀಶ್ ಪಾಂಡೆ(ನಾಯಕ), ಶ್ರೇಯಸ್ ಗೋಪಾಲ್(ಉಪನಾಯಕ), ಡಿ.ನಿಶ್ಚಲ್, ಆರ್.ಸಮರ್ಥ್, ಕರುಣ್ ನಾಯರ್, ಕೆ.ವಿ ಸಿದ್ಧಾರ್ಥ್, ಆರ್.ವಿನಯ್ ಕುಮಾರ್, ಕೆ.ಗೌತಮ್, ಎಂ.ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪವನ್ ದೇಶಪಾಂಡೆ, ಬಿ.ಆರ್ ಶರತ್(ವಿಕೆಟ್ ಕೀಪರ್), ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಜೆ.ಸುಚಿತ್.

ರಾಜಸ್ಥಾನ: ಮಹಿಪಾಲ್ ಲೊಮ್ರೊರ್(ನಾಯಕ), ದೀಪಕ್ ಚಹಾರ್(ಉಪನಾಯಕ), ರಾಜೇಶ್ ಬಿಷ್ಣೋಯ್, ಚೇತನ್ ಬಿಶ್ಟ್, ರಾಬಿನ್ ಬಿಶ್ಟ್, ರಾಹುಲ್ ಚಹಾರ್, ಅನಿಕೇತ್ ಚೌಧರಿ, ಅಮಿತ್ ಕುಮಾರ್ ಗೌತಮ್, ಅರ್ಜಿತ್ ಗುಪ್ತಾ, ಸಲ್ಮಾನ್ ಖಾನ್, ಮಣಿಂದರ್ ಸಿಂಗ್, ಅಶೋಕ್ ಮೆನಾರಿಯ, ನಾಥು ಸಿಂಗ್, ತಾಜಿಂದರ್ ಸಿಂಗ್, ಟಿಎಮ್ ಉಲ್ ಹಕ್.

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ

LEAVE A REPLY

Please enter your comment!
Please enter your name here

five − 3 =