ರಣಜಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿ ಸೆಮಿಫೈನಲ್ ತಲುಪಿದ ಸೌರಾಷ್ಟ್ರ

0
PC: Pujara/Twitter

ಲಕ್ನೋ, ಜನವರಿ 19: ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತವನ್ನು ಬೆನ್ನಟ್ಟಿ ಗೆದ್ದ ಸೌರಾಷ್ಟ್ರ ತಂಡ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿದೆ.

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಅಂತ್ಯಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಆತಿಥೇಯ ಉತ್ತರ ಪ್ರದೇಶ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿತು. 372 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಸೌರಾಷ್ಟ್ರ 115.1 ಓವರ್ ಗಳಲ್ಲಿ 4 ವಿಕೆಟ್ ಒಪ್ಪಿಸಿ ದಾಖಲೆಯ ಜಯ ಗಳಿಸಿತು. ಇದು ರಣಜಿ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಅತಿ ದೊಡ್ಡ ರನ್ ಚೇಸ್. ಈ ಮೂಲಕ ಸೌರಾಷ್ಟ್ರ ತಂಡ ಅಸ್ಸಾಂ ತಂಡ 10 ವರ್ಷಗಳ ಹಿಂದೆ ಬರೆದಿದ್ದ ದಾಖಲೆಯನ್ನು ಪುಡಿಗಟ್ಟಿತು. 2008/09ನೇ ಸಾಲಿನಲ್ಲಿ ಅಸ್ಸಾಂ ತಂಡ ಸರ್ವಿಸಸ್ ವಿರುದ್ಧ 371 ರನ್ ಗಳ ಗುರಿ ಬೆನ್ನಟ್ಟಿ ಗೆದ್ದು ದಾಖಲೆ ಬರೆದಿತ್ತು.

ಹಾರ್ವಿಕ್ ದೇಸಾಯಿ(116), ಸ್ನೆಲ್ ಪಟೇಲ್(72), ಚೇತೇಶ್ವರ್ ಪೂಜಾರ(ಅಜೇಯ 67) ಮತ್ತು ಶೆಲ್ಡನ್ ಜಾಕ್ಸನ್(ಅಜೇಯ 73) ಸೌರಾಷ್ಟ್ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜನವರಿ 24ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಆತಿಥೇಯ ಕರ್ನಾಟಕ ತಂಡವನ್ನು ಎದುರಿಸಲಿದೆ.

Brief scores

Uttar Pradesh: 385 and 194 all out in 72.1 overs (Mohammad Saif 48, Upendra Yadav 35; DA Jadeja 4/53, C Sakariya 3/38) lost to Saurashtra: 208 and 372/4 in 115.1 overs (Harvik Desai 116, Snell Patel 72, Cheteshwar Pujara 67 not out, Sheldon Jackson 73 not out; Aksh Deep Nath 1/17) by 6 wickets.

LEAVE A REPLY

Please enter your comment!
Please enter your name here

5 × 5 =