ರಣಜಿ ಟ್ರೋಫಿ: ಒಂದೇ ದಿನ 20 ವಿಕೆಟ್ ಪತನ, ಕರ್ನಾಟಕಕ್ಕೆ ಹೀನಾಯ ಸೋಲು

0
Dharmedrasinh Jadeja in action against Karnataka. PC: SCA

ರಾಜ್ ಕೋಟ್, ಡಿಸೆಂಬರ್ 8: ದಯನೀಯ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕರ್ನಾಟಕ ತಂಡ, ರಣಜಿ ಟ್ರೋಫಿ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ 87 ರನ್ ಗಳ ಹೀನಾಯ ಸೋಲು ಕಂಡಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಎಲೈಟ್ ‘ಎ’ ಗುಂಪಿನ ಪಂದ್ಯವನ್ನು ಮೂರೇ ದಿನಗಳಲ್ಲಿ ಸೋತ ಕರ್ನಾಟಕ 4 ಪಂದ್ಯಗಳೊಂದಿಗೆ ಒಟ್ಟು 12 ಅಂಕ ಗಳಿಸಿ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಸ್ಪಿನ್ ಬೌಲರ್ ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾದ ಪಂದ್ಯದ 3ನೇ ದಿನ 20 ವಿಕೆಟ್ ಗಳು ಉರುಳಿದ್ದು ಈ ಪೈಕಿ 19 ವಿಕೆಟ್ ಗಳನ್ನು ಸ್ಪಿನ್ನರ್ ಗಳೇ ಪಡೆದರು. 99 ರನ್ ಗಳ ಮುನ್ನಡೆಯೊಂದಿಗೆ 3ನೇ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ, ಕರ್ನಾಟಕದ ಬೌಲರ್ ಗಳ ಮಾರಕ ದಾಳಿಗೆ ನಲುಗಿ ಕೇವಲ 79 ರನ್ನಿಗೆ ಆಲೌಟಾಯಿತು. ಕರ್ನಾಟಕ ಪರ ಸ್ಪಿನ್ನರ್ ಗಳಾದ ಶ್ರೇಯಸ್ ಗೋಪಾಲ್ (3/10), ಜೆ.ಸುಚಿತ್ (3/29) ಮತ್ತು ಪವನ್ ದೇಶಪಾಂಡೆ (3/5) ತಲಾ 3 ವಿಕೆಟ್ ಉರುಳಿಸಿದರು.

ನಂತರ 179 ರನ್ ಗಳ ಸವಾಲಿನ ಗುರಿ ಬೆನ್ನಟ್ಟಿದ ಕರ್ನಾಟಕವೂ 2ನೇ ಇನ್ನಿಂಗ್ಸ್ ನಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಸೌರಾಷ್ಟ್ರ ಸ್ಪಿನ್ನರ್ ಗಳಾದ ದೇವೇಂದ್ರಸಿನ್ಹ ಜಡೇಜಾ (4/33) ಮತ್ತು ಕಮಲೇಶ್ ಮಕ್ವಾನ (5/28) ದಾಳಿಗೆ ಕುಸಿದ ಕರ್ನಾಟಕ 91 ರನ್ನಿಗೆ ಆಲೌಟಾಗಿ ಪ್ರಸಕ್ತ ಸಾಲಿನಲ್ಲಿ ಮೊದಲ ಸೋಲು ಅನುಭವಿಸಿತು.

ರನ್ ಚೇಸಿಂಗ್ ವೇಳೆ ಕರ್ನಾಟಕ 5 ರನ್ನಿಗೆ ಸಮರ್ಥ್ (0), ಡಿ.ನಿಶ್ಚಲ್ (1) ಮತ್ತು ದೇವದತ್ತ್ ಪಡಿಕಲ್ (2) ಅವರನ್ನು ಕಳೆದುಕೊಂಡು ತೀರಾ ಸಂಕಷ್ಟಕ್ಕೆ ಸಿಲುಕಿತು. ಆದರೆ ಅನುಭವಿಗಳಾದ ಕರುಣ್ ನಾಯರ್ (30) ಮತ್ತು ಶ್ರೇಯಸ್ ಗೋಪಾಲ್ (27) 4ನೇ ವಿಕೆಟ್ ಗೆ 60 ರನ್ ಸೇರಿಸಿ ತಂಡದ ಜಯದ ಆಸೆಯನ್ನು ಚಿಗುರಿಸಿದರು. ಆದರೆ ಕರುಣ್ ನಾಯರ್ 30 ರನ್ ಗಳಿಸಿದ್ದ ವೇಳೆ ಮಕ್ವಾನ ಎಸೆತದಲ್ಲಿ ರಿವರ್ಸ್ ಸ್ವೀಪ್ ಹೊಡೆತಕ್ಕೆ ಮುಂದಾಗಿ ಎಲ್ಬಿಡಬ್ಲ್ಯು ಆಗುತ್ತಿದ್ದಂತೆ ಕರ್ನಾಟಕದ ಕುಸಿತ ಆರಂಭವಾಯಿತು. ತನ್ನ ಕೊನೆಯ 7 ವಿಕೆಟ್ ಗಳನ್ನು ಕರ್ನಾಟಕ 26 ರನ್ ಗಳ ಅಂತರದಲ್ಲಿ ಕಳೆದುಕೊಂಡಿತು.

ಡಿಸೆಂಬರ್ 14ರಂದು ಸೂರತ್ ನಲ್ಲಿ ಆರಂಭವಾಗಲಿರುವ ತನ್ನ 5ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಗುಜರಾತ್ ತಂಡವನ್ನು ಎದುರಿಸಲಿದೆ.

Brief scores: Saurashtra (I innings): 316 & II innings: 79 all out in 27.4 overs (Snell Patel 22, J. Suchith 3/29, Pavan Deshpande 3/5, Shreyas Gopal 3/10) bt Karnataka (I innings): 217 & II innings: 91 all out in 36.5 overs (Karun Nair 30, Shreyas Gopal 27, Dharmendrasinh jadeja 4/44, Kamlesh Makvana 5/28) ny 87 runs.

LEAVE A REPLY

Please enter your comment!
Please enter your name here

2 + twelve =