ರಣಜಿ ಟ್ರೋಫಿ: Q/Fನಲ್ಲಿ ರಾಜ್ಯಕ್ಕೆ ರಾಜಸ್ಥಾನ ಎದುರಾಳಿ, ಜ.15ರಿಂದ ಬೆಂಗಳೂರಿನಲ್ಲಿ ಪಂದ್ಯ

0ಬೆಂಗಳೂರು, ಜನವರಿ 10: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ.

ಈ  ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 15ರಂದು ಆರಂಭವಾಗಲಿದೆ. ಈ ಪಂದ್ಯದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.

ಎಲೈಟ್ ‘ಎ’ ಗುಂಪಿನಲ್ಲಿ ಆಡಿದ 8 ಪಂದ್ಯಗಳಲ್ಲಿ ಕರ್ನಾಟಕ ತಂಡ 3 ಗೆಲುವು, 3 ಡ್ರಾ ಹಾಗೂ 2 ಸೋಲುಗಳೊಂದಿಗೆ 27 ಅಂಕ ಗಳಿಸಿ ಗುಂಪಿನಲ್ಲಿ 27 ಪಾಯಿಂಟ್ಸ್ ಗಳಿಸಿತ್ತು. ‘ಎ’ ಹಾಗೂ ‘ಬಿ’ ಗುಂಪಿನಿಂದ ವಿದರ್ಭ(29 ಅಂಕ), ಸೌರಾಷ್ಟ್ರ(29 ಅಂಕ), ಕರ್ನಾಟಕ(27 ಅಂಕ), ಗುಜರಾತ್(26 ಅಂಕ) ಮತ್ತು ಕೇರಳ(26 ಅಂಕ) ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ‘ಸಿ’ ಗುಂಪಿನಿಂದ ರಾಜಸ್ಥಾನ(51 ಅಂಕ) ಮತ್ತು ಉತ್ತರ ಪ್ರದೇಶ(41 ಅಂಕ) ಹಾಗೂ ‘ಡಿ’ ಗುಂಪಿನಿಂದ ಉತ್ತರಖಂಡ್(44 ಅಂಕ) ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ರಣಜಿ ಟ್ರೋಫಿ: ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ

ವಿದರ್ಭ Vs ಉತ್ತರಖಂಡ್ (ನಾಗ್ಪುರ)

ಸೌರಾಷ್ಟ್ರ Vs ಉತ್ತರಪ್ರದೇಶ (ಲಕ್ನೊ)

ಕರ್ನಾಟಕ Vs ರಾಜಸ್ಥಾನ (ಬೆಂಗಳೂರು)

ಕೇರಳ Vs ಗುಜರಾತ್ (ವಯನಾಡ್)LEAVE A REPLY

Please enter your comment!
Please enter your name here

18 + nine =