ರಣಜಿ ಟ್ರೋಫಿ: ಗುಜರಾತ್ ವಿರುದ್ದ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

0
PC: Facebook

ಸೂರತ್, ಡಿಸೆಂಬರ್ 16: ರಣಜಿ ಟ್ರೋಫಿ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡಕ್ಕೆತಿರುಗೇಟು ನೀಡಿದೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ 216 ರನ್ ಗಳಿಗೆ ಕುಸಿದಿದ್ದ ಗುಜರಾತ್, ತನ್ನ 2ನೇ ಇನ್ನಿಂಗ್ಸ್ ನಲ್ಲಿ 3ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದ್ದು, 14 ರನ್ ಗಳ ಮುನ್ನಡೆಯಲ್ಲಿದೆ. ಪಂದ್ಯದ ಕೊನೆಯ ದಿನವಾದ ಸೋಮವಾರ ಕರ್ನಾಟಕಕ್ಕೆ ಗೆಲ್ಲುವ ಅವಕಾಶಗಳಿದ್ದು, ರುಜುಲ್ ಭಟ್ (ಅಜೇಯ 82) ಮತ್ತು ಮನ್ಪ್ರೀತ್ ಜುನೇಜಾ (ಅಜೇಯ 21) ಅವರ ವಿಕೆಟ್ ಗಳನ್ನು ಬೇಗನೆ ಉರುಳಿಸಿದರೆ, ಕರ್ನಾಟಕದ ತಂಡದ ಗೆಲ್ಲುವ ಅವಕಾಶಗಳು ಹೆಚ್ಚಲಿವೆ.
ಗುಜರಾತ್ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೇವಲ 6 ರನ್ನಿಗೆ 2 ವಿಕೆಟ್ ಕಳೆದುಕೊಂಡು ಮತ್ತೆ ಕುಸಿತದ ಭೀತಿ ಎದುರಿಸಿತು. ಆದರೆ ಭಾರ್ಗವ್ ಮೆರಾಯ್(74) ಮತ್ತು ರುಜುರು ಭಟ್ (ಅಜೇಯ 82) 3ನೇ ವಿಕೆಟ್ ಗೆ 134 ರನ್ ಸೇರಿಸಿ ಕರ್ನಾಟಕಕ್ಕೆ ಸಡ್ಡು ಹೊಡೆದರು.
ಇದಕ್ಕೂ ಮೊದಲು 7 ವಿಕೆಟ್ ಗೆ 348 ರನ್ ಗಳಿಂದ 3ನೇ ದಿನದಾಟ ಮುಂದುವರಿಸಿದ ಕರ್ನಾಟಕ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 389 ರನ್ ಗಳಿಗೆ ಆಲೌಟಾಗಿ 173 ರನ್ ಗಳ ಬೃಹತ್ ಮುನ್ನಡೆ ಸಂಪಾದಿಸಿತು. ಪದಾರ್ಪಣೆಯ ಪಂದ್ಯದಲ್ಲಿ 47 ರನ್ ಗಳಿಸಿ ಅಜೇಯರಾಗುಳಿದಿದ್ದ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ 3ನೇ ದಿನ ಅದೇ ಮೊತ್ತಕ್ಕೆ ಔಟಾಗಿ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು. ಆದರೆ ನಾಯಕ ಆರ್.ವಿನಯ್ ಕುಮಾರ್ ಜವಾಬ್ದಾರಿಯುತ ಆಟವಾಡಿ 99 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ತಂಡಕ್ಕೆ ದೊಡ್ಡ ಮುನ್ನಡೆ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್
ಗುಜರಾತ್: 216 ಮತ್ತು 69 ಓವರ್ ಗಳಲ್ಲಿ 187/3 (ಭಾರ್ಗವ್ ಮೆರಾಯ್ 74, ರುಜುಲ್ ಭಟ್ 82; ಪ್ರತೀಕ್ ಜೈನ್ 1/42, ಕೆ.ಗೌತಮ್ 1/44, ರೋನಿತ್ ಮೋರೆ 1/29).
ಕರ್ನಾಟಕ: 121 ಓವರ್ ಗಳಲ್ಲಿ 389 (ಶ್ರೇಯಸ್ ಗೋಪಾಲ್ 93, ದೇವದತ್ ಪಡಿಕಲ್ 74, ಆರ್.ವಿನಯ್ ಕುಮಾರ್ 51, ಶರತ್ ಶ್ರೀನಿವಾಸ್ 47; ಅಕ್ಷರ್ ಪಟೇಲ್ 3/84, ನಾಗ್ವಸ್ವಾಲ 3/48).

LEAVE A REPLY

Please enter your comment!
Please enter your name here

5 × three =