ರಣಜಿ ಟ್ರೋಫಿ: ಗುಜರಾತ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ

0

ಸೂರತ್, ಡಿಸೆಂಬರ್ 15: ಆತಿಥೇಯ ಗುಜರಾತ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ‘ಎ’ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಇನ್ನಿಂಗ್ಸ್ ಮುನ್ನಡೆ ಸಂಪಾದಿಸಿದೆ.

2 ವಿಕೆಟ್ ಗೆ 45 ರನ್ ಗಳಿಂದ ದ್ವಿತೀಯ ದಿನದಾಟ ಮುಂದುವರಿಸಿದ ಕರ್ನಾಟಕ, ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 348 ರನ್ ಗಳಿಸಿದೆ. ಕೈಯಲ್ಲಿ 3 ವಿಕೆಟ್ ಉಳಿಸಿಕೊಂಡಿರುವ ಕರ್ನಾಟಕ ತಂಡ 132 ರನ್ ಗಳ ಉತ್ತಮ ಮುನ್ನಡೆಯಲ್ಲಿದೆ.

ಕರ್ನಾಟಕದ ಬ್ಯಾಟಿಂಗ್ ಸರದಿಯಲ್ಲಿ ಶ್ರೇಯಸ್ ಗೋಪಾಲ್(93) ಶತಕ ವಂಚಿತರಾದರೆ, ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್(74) ಅರ್ಧಶತಕದ ಕಾಣಿಕೆಯಿತ್ತರು. ಶ್ರೇಯಸ್ ಗೋಪಾಲ್ ಮತ್ತು ಚೊಚ್ಚಲ ರಣಜಿ ಪಂದ್ಯವಾಡುತ್ತಿರು. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್(47*) 6ನೇ ವಿಕೆಟ್ ಗೆ 117 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಪದಾರ್ಪಣೆಯ ಪಂದ್ಯದಲ್ಲಿ ದಿಟ್ಟತನ ಪ್ರದರ್ಶಿಸಿದ ಶರತ್ ಶ್ರೀನಿವಾಸ್ ಅಜೇಯ 47 ರನ್ ಗಳಿಸಿದ್ದು, ನಾಯಕ ವಿನಯ್ ಕುಮಾರ್(16*) ಜೊತೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Brief scores 

Gujarat: 216 all out in 69.4 overs Vs Karnataka: 348/7 in 105 overs (Shreyas Gopal 93, Devdutt Padikkal 74, Sharath Srinivas 47 not out, Nagwaswala 3/48, Axar Patel 2/73).

LEAVE A REPLY

Please enter your comment!
Please enter your name here

nine + 9 =