ರಣಜಿ ಟ್ರೋಫಿ: ಗೌತಮ್ ದಾಳಿಗೆ ಕುಸಿದ ರೈಲ್ವೇಸ್, ಕರ್ನಾಟಕಕ್ಕೆ ಭರ್ಜರಿ ಜಯ

0

ಶಿವಮೊಗ್ಗ, ಡಿಸೆಂಬರ್ 25: ಆಫ್ ಸ್ಪಿನ್ನರ್ ಕೆ.ಗೌತಮ್(6/30) ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 176 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಈ ಮೂಲಕ ಪಂದ್ಯದಲ್ಲಿ ಪೂರ್ಣ 6 ಅಂಕ ಗಳಿಸಿದ ಕರ್ನಾಟಕ ಎಲೈಟ್ ‘ಎ’ ಗುಂಪಿನಲ್ಲಿ ಆಡಿದ 6 ಪಂದ್ಯಗಳಿಂದ 2 ಗೆಲುವು, 1 ಸೋಲು ಮತ್ತು 3 ಡ್ರಾಗಳೊಂದಿಗೆ ಒಟ್ಟು 21 ಅಂಕ ಸಂಪಾದಿಸಿ ತನ್ನ ನಾಕೌಟ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಶಿವಮೊಗ್ಗದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 391 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ರೈಲ್ವೇಸ್ 1 ವಿಕೆಟ್ ಗೆ 44 ರನ್ ಗಳಿಂದ ಅಂತಿಮ ದಿನದಾಟ ಮುಂದುವರಿಸಿತು. ದಿನದ ಮೊದಲ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ತಿರುಗೇಟು ನೀಡಿದ ರೈಲ್ವೇಸ್ 2 ವಿಕೆಟ್ ಗೆ 119 ರನ್ ಗಳಿಸಿ ಪಂದ್ಯವನ್ನು ಡ್ರಾಗೊಳಿಸುವತ್ತ ಮುನ್ನಡೆಯಿತು. 2ನೇ ಅವಧಿಯಲ್ಲಿ 2 ವಿಕೆಟ್ ಕಳೆದುಕೊಂಡ ರೈಲ್ವೇಸ್ ಚಹಾ ವಿರಾಮದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲೇ ಇತ್ತು.
ಆದರೆ ಪಂದ್ಯದ ಕೊನೆಯ ಅವಧಿಯಲ್ಲಿ ಆಫ್ ಸ್ಪಿನ್ನರ್ ಕೆ.ಗೌತಮ್ ಅವರ ಸ್ಪಿನ್ ಮೋಡಿಗೆ ರೈಲ್ವೇಸ್ ತತ್ತರಿಸಿ ಹೋಯಿತು. 30 ರನ್ನಿತ್ತು 6 ವಿಕೆಟ್ ಉರುಳಿಸಿದ ಗೌತಮ್ ಅವರಿಗೆ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(2/39) ಎರಡು ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು. ಸ್ಪಿನ್ ದಾಳಿಗೆ ನಲುಗಿದ ಕರ್ನಾಟಕ ತನ್ನ 2ನೇ ಇನ್ನಿಂಗ್ಸ್ ನಲ್ಲಿ 185 ರನ್ ಗಳಿಗೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತು.
ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ(52) ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಶತಕ(101) ಬಾರಿಸಿದ ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಡಿ.ನಿಶ್ಚಲ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ನ್ಯೂಜಿಲೆಂಡ್ ಪ್ರವಾಸದಿಂದ ವಾಪಸ್ಸಾಗಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ ಮನೀಶ್ ಪಾಂಡೆ, ತಾವು ಪ್ರಸಕ್ತ ಸಾಲಿನಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲೇ ಕರ್ನಾಟಕಕ್ಕೆ ಜಯ ತಂದುಕೊಟ್ಟರು.
ಡಿಸೆಂಬರ್ 30ರಂದು ಬೆಂಗಳೂರಿನ ಆಲೂರಿನಲ್ಲಿ ಆರಂಭವಾಗಲಿರುವ ತನ್ನ 7ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಛತ್ತೀಸ್ ಗಢ ತಂಡವನ್ನು ಎದುರಿಸಲಿದೆ.

Brief scores
Karnataka: 214 & 290/2 declared in 84 overs (D Nischal 101, Devdutt Padikkal 75, KV Siddharth 84 not out; Harsh Tyagi 2/78) beat Railways: 143 & 185 all out in 86 overs (Saurabh Wakaskar 43, PS Singh 48; K Gowtham 6/30, Shreyas Gopal 2/39, M Prasidh Krishna 1/24) by 176 runs.

LEAVE A REPLY

Please enter your comment!
Please enter your name here

one × one =