ರಣಜಿ ಟ್ರೋಫಿ: ದ್ರಾವಿಡ್, ಜಿ.ಆರ್.ವಿಶ್ವನಾಥ್ ಸಾಲಿಗೆ ಕೆ.ವಿ ಸಿದ್ದಾರ್ಥ್

0

ಬೆಳಗಾವಿ, ನವೆಂಬರ್ 21: ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಅಮೋಘ 161 ರನ್ ಗಳಿಸಿ ಕರ್ನಾಟಕಕ್ಕೆ ಆಸರೆಯಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆ.ವಿ ಸಿದ್ದಾರ್ಥ್, ಈ ಮೂಲಕ ಕರ್ನಾಟಕದ ಬ್ಯಾಟಿಂಗ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಜಿ.ಆರ್ ವಿಶ್ವನಾಥ್ ಅವರ ಸಾಲಿಗೆ ಸೇರಿದ್ದಾರೆ.
ರಣಜಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಇನ್ನಿಂಗ್ಸ್ ಒಂದರಲ್ಲಿ 150 ಮತ್ತು 150ಕ್ಕಿಂತ ಹೆಚ್ಚು ರನ್ ಗಳಿಸಿದವರ ಸಾಲಿಗೆ ಸಿದ್ದಾರ್ಥ್ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಕರ್ನಾಟಕದ 7 ಆಟಗಾರರು ಈ ಸಾಧನೆ ಮಾಡಿದ್ದರು.

ರಣಜಿ ಟ್ರೋಫಿ: ಮುಂಬೈ ವಿರುದ್ಧ ಇನ್ನಿಂಗ್ಸ್ ಒಂದರಲ್ಲಿ 150+ ರನ್ ಗಳಿಸಿದ ಕರ್ನಾಟಕದ ಆಟಗಾರರು
ರಾಹುಲ್ ದ್ರಾವಿಡ್ (214 ರನ್): 2007/08 (ಮುಂಬೈ)
ಮನೀಶ್ ಪಾಂಡೆ (200* ರನ್): 2011/12 (ಮುಂಬೈ)
ಆರ್.ಸಮರ್ಥ್ (180 ರನ್): 2014/15 (ಮುಂಬೈ)
ಅಮಿತ್ ವರ್ಮಾ (173 ರನ್): 2011/12 (ಮುಂಬೈ)
ಜಿ.ಆರ್ ವಿಶ್ವನಾಥ್ (162 ರನ್): 1973/74 (ಬೆಂಗಳೂರು)
ಕೆ.ವಿ ಸಿದ್ದಾರ್ಥ್ (161 ರನ್): 2018/19 (ಬೆಳಗಾವಿ)
ಆರ್.ಸುಧಾಕರ್ ರಾವ್ (155 ರನ್): 1981/82 (ಬೆಂಗಳೂರು)
ಶ್ರೇಯಸ್ ಗೋಪಾಲ್ (150* ರನ್): 2017/18 (ನಾಗ್ಪುರ)

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ

LEAVE A REPLY

Please enter your comment!
Please enter your name here

7 − three =