ರಣಜಿ ಟ್ರೋಫಿ: ನಾಗ್ಪುರದಲ್ಲಿ ನ.12ರಿಂದ ಕರ್ನಾಟಕದ ಮೊದಲ ಪಂದ್ಯ

0
ಬೆಂಗಳೂರು, ಅಕ್ಟೋಬರ್ 23: 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ 2018-19ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ನಾಗ್ಪುರದಲ್ಲಿ ಹಾಲಿ ಚಾಂಪಿಯನ್ಸ್ ವಿದರ್ಭ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 12ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಎಲೈಟ್ ಎ ಗುಂಪಿನಲ್ಲಿರುವ ಕರ್ನಾಟಕ ಒಟ್ಟು 8 ಲೀಗ್ ಪಂದ್ಯಗಳನ್ನಾಡಲಿದ್ದು, ನಾಲ್ಕು ಪಂದ್ಯಗಳನ್ನು ತವರಿನ ಹೊರಗೆ ಮತ್ತು ಉಳಿದ ನಾಲ್ಕು ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಮುಂಬೈ ವಿರುದ್ಧ ಬೆಳಗಾವಿಯಲ್ಲಿ, ಮಹಾರಾಷ್ಟ್ರ ವಿರುದ್ಧ ಮೈಸೂರಿನಲ್ಲಿ, ರೈಲ್ವೇಸ್ ವಿರುದ್ಧ ಶಿವಮೊಗ್ಗದಲ್ಲಿ ಮತ್ತು ಛತ್ತೀಸ್ ಗಢ ವಿರುದ್ಧ ಬೆಂಗಳೂರಿನ ಹೊರವಲಯಲ್ಲಿರುವ ಆಲೂರಿನಲ್ಲಿ ಕರ್ನಾಟಕ ತನ್ನ ತವರು ಪಂದ್ಯಗಳನ್ನಾಡಲಿದೆ.
ರಣಜಿ ಟ್ರೋಫಿ: ಕರ್ನಾಟಕದ ಪಂದ್ಯಗಳ ವೇಳಾಪಟ್ಟಿ
ಪಂದ್ಯ ಆರಂಭ ಎದುರಾಳಿ ಸ್ಥಳ
ನವೆಂಬರ್ 12 ವಿದರ್ಭ ನಾಗ್ಪುರ
ನವೆಂಬರ್ 20 ಮುಂಬೈ ಬೆಳಗಾವಿ
ನವೆಂಬರ್ 28 ಮಹಾರಾಷ್ಟ್ರ ಮೈಸೂರು
ಡಿಸೆಂಬರ್ 06 ಸೌರಾಷ್ಟ್ರ ರಾಜ್ ಕೋಟ್
ಡಿಸೆಂಬರ್ 14 ಗುಜರಾತ್ ಸೂರತ್
ಡಿಸೆಂಬರ್ 22 ರೈಲ್ವೇಸ್ ಶಿವಮೊಗ್ಗ
ಡಿಸೆಂಬರ್ 30 ಛತ್ತೀಸ್ ಗಢ ಬೆಂಗಳೂರು(ಆಲೂರು)
ಜನವರಿ 07 ಬರೋಡ ವಡೋದರ

LEAVE A REPLY

Please enter your comment!
Please enter your name here

seven + eighteen =